Friday, 22nd November 2024

ಮೊರ್ಬಿ ತೂಗು ಸೇತುವೆ ಕುಸಿತ ಪ್ರಕರಣ: ಆರೋಪ ಪಟ್ಟಿ ಸಲ್ಲಿಕೆ

ಮೊರ್ಬಿ: ಕಳೆದ ವರ್ಷ ಅಕ್ಟೋಬರ್‌ನಲ್ಲಿ ಗುಜರಾತ್‌ನ ಮೊರ್ಬಿ ಪಟ್ಟಣದಲ್ಲಿ ಸಂಭವಿಸಿದ ತೂಗು ಸೇತುವೆ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಥಳೀಯ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ.

ಮೊರ್ಬಿ ದುರ್ಘಟನೆಯಲ್ಲಿ 135 ಜನರು ಸಾವನ್ನಪ್ಪಿದ್ದರು.

1,200 ಕ್ಕೂ ಹೆಚ್ಚು ಪುಟಗಳಿರುವ ಚಾರ್ಜ್ ಶೀಟ್ ಅನ್ನು ಪ್ರಕರಣದ ತನಿಖಾಧಿಕಾರಿಯಾಗಿರುವ ಡಿಎಸ್‌ಪಿ ಪಿ.ಎಸ್.ಝಲಾ ಅವರು ಮೊರ್ಬಿ ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಜೈಲಿನಲ್ಲಿರುವ ಒಂಬತ್ತು ಆರೋಪಿಗಳ ಜತೆಗೆ, ಸೇತುವೆಯನ್ನು ನಿರ್ವಹಿಸುತ್ತಿದ್ದ ಒರೆವಾ ಗ್ರೂಪ್‌ನ ಜಯಸುಖ್ ಪಟೇಲ್ ಅವರನ್ನು ಹತ್ತನೇ ಆರೋಪಿ ಎಂದು ಆರೋಪಪಟ್ಟಿಯಲ್ಲಿ ಹೆಸರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಕ್ಟೋಬರ್ 30, 2022 ರ ಸೇತುವೆ ಕುಸಿತದ ಘಟನೆಗೆ ಸಂಬಂಧಿಸಿದಂತೆ ಜಿಲ್ಲಾ ನ್ಯಾಯಾ ಲಯವು ಈಗಾಗಲೇ ಜಯಸುಖ್ ಪಟೇಲ್ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ. ಅವರ ನಿರೀಕ್ಷಣಾ ಜಾಮೀನು ಅರ್ಜಿ ಫೆಬ್ರವರಿ 1 ರಂದು ವಿಚಾರಣೆಗೆ ಬರಲಿದೆ.

ಮಚ್ಚು ನದಿಗೆ ಅಡ್ಡಲಾಗಿ ಕಟ್ಟಿದ್ದ ಬ್ರಿಟಿಷರ ಕಾಲದ ತೂಗು ಸೇತುವೆಯ ಕಾರ್ಯಾಚರಣೆ ಮತ್ತು ನಿರ್ವಹಣೆಯ ಜವಾಬ್ದಾರಿಯನ್ನು ಅಜಂತಾ ಮ್ಯಾನುಫ್ಯಾಕ್ಚರಿಂಗ್ ಲಿಮಿಟೆಡ್ (ಒರೆವಾ ಗ್ರೂಪ್) ವಹಿಸಿಕೊಂಡಿದೆ.

 
Read E-Paper click here