Tuesday, 17th December 2024

Mortar Bomb: ಮಣಿಪುರ ಸಿಎಂ ಬಿರೇನ್‌ ಸಿಂಗ್‌ ನಿವಾಸದ ಬಳಿ ಬಾಂಬ್‌ ಪತ್ತೆ; ಬಿಗಿ ಭದ್ರತೆ

ಇಂಫಾಲ್:‌ ಇಂದು (ಡಿ. 17) ಮುಂಜಾನೆ ಮಣಿಪುರ(Manipur) ಮುಖ್ಯಮಂತ್ರಿ(Chief Minister) ಎನ್ ಬಿರೇನ್ ಸಿಂಗ್(N Biren Singh) ಅವರ ಖಾಸಗಿ ನಿವಾಸದ ಬಳಿಯಿರುವ ಲುವಾಂಗ್‌ಶಾಂಗ್‌ಬಾಮ್‌ನಿಂದ( Luwangshangbam) ಒಂದು ಕಿಲೋಮೀಟರ್ ದೂರದಲ್ಲಿರುವ ಕೊಯಿರೆಂಗೆಯ್(Koirengei) ಬಳಿ ಸ್ಫೋಟವಾಗದ ಮಾರ್ಟರ್‌ ಬಾಂಬ್(Mortar Bomb) ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ನಿನ್ನೆ ರಾತ್ರಿ ರಾಕೆಟ್ ಪ್ರೊಪೆಲ್ಡ್ ಬಾಂಬ್ ಅನ್ನು ಹಾರಿಸಲಾಗಿದ್ದು, ಆದರೆ ಅದು ಸ್ಫೋಟಗೊಂಡಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಇಂದು ಮುಂಜಾನೆ ಸ್ಫೋಟಗೊಳ್ಳದ 51 ಎಂಎಂ ಮಾರ್ಟರ್ ಬಾಂಬ್(MM Mortar Bomb) ಪತ್ತೆಯಾಗಿದ್ದು, ಆ ಪ್ರದೇಶದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.

ಅಧಿಕಾರಿಗಳು ಬೆಳಗ್ಗೆಯಿಂದ ಆ ಪ್ರದೇಶದ ಸುತ್ತಮುತ್ತ ಬಿಗಿ ಭದ್ರತಾ ಕ್ರಮಗಳನ್ನು ಒದಗಿಸಿದ್ದಾರೆ. ಅಷ್ಟೇ ಅಲ್ಲದೆ ಲೈವ್‌ ಮಾರ್ಟರ್ ಬಾಂಬ್‌ನ ಮೂಲವನ್ನು ಮತ್ತು ಮುಖ್ಯಮಂತ್ರಿಯ ನಿವಾಸದ ಬಳಿ ಅದನ್ನು ಇರಿಸಿದ್ದರ ಹಿಂದಿನ ಉದ್ದೇಶವನ್ನು ತಿಳಿದುಕೊಳ್ಳಲು ತನಿಖೆಯನ್ನು ಪ್ರಾರಂಭಿಸಿದ್ದಾರೆ.

ಇತ್ತೀಚೆಗೆ ಹೀಂಗಾಂಗ್ ಪೊಲೀಸ್ ಠಾಣೆಯ ವ್ಯಾಪ್ತಿಯ ಇಂಫಾಲ್ ಪ್ರದೇಶದ ಆಸುಪಾಸಿನಲ್ಲಿರುವ ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ವ ಗುತ್ತಿಗೆದಾರರ ನಿವಾಸದ ಬಳಿ ಹ್ಯಾಂಡ್ ಗ್ರೆನೇಡ್ ಪತ್ತೆಯಾಗಿತ್ತು.

ದೆಹಲಿಯ 6 ಶಾಲೆಗಳಿಗೆ ಮತ್ತೆ ಬಾಂಬ್ ಬೆದರಿಕೆ

ರಾಷ್ಟ್ರ ರಾಜಧಾನಿ ದೆಹಲಿಯ 6 ಶಾಲೆಗಳಿಗೆ ನಾಲ್ಕು ದಿನಗಳ ಹಿಂದೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಹಾಕಲಾಗಿತ್ತು. ಪಶ್ಚಿಮ ವಿಹಾರ್‌ನ ಭಟ್ನಾಗರ್ ಇಂಟರ್‌ನ್ಯಾಷನಲ್‌ ಸ್ಕೂಲ್‌, ಶ್ರೀನಿವಾಸ್ ಪುರಿಯ ಕೇಂಬ್ರಿಡ್ಜ್ ಸ್ಕೂಲ್‌, ಡಿಫೆನ್ಸ್ ಕಾಲೋನಿಯಲ್ಲಿರುವ ಸೌತ್ ದೆಹಲಿ ಪಬ್ಲಿಕ್ ಸ್ಕೂಲ್, ಸಫ್ದರ್‌ಜಂಗ್‌ನಲ್ಲಿರುವ ದೆಹಲಿ ಪೊಲೀಸ್ ಪಬ್ಲಿಕ್ ಸ್ಕೂಲ್, ವೆಂಕಟೇಶ್ವರ್ ಗ್ಲೋಬಲ್ ಸ್ಕೂಲ್ ಹಾಗೂ ಡಿಪಿಎಸ್ ಅಮರ್ ಕಾಲೋನಿಯ ಶಾಲೆಗೆ ಇಮೇಲ್‌ ಮೂಲಕ ಬೆದರಿಕೆ ಹಾಕಲಾಗಿತ್ತು ಎಂದು ಅಗ್ನಿಶಾಮಕ ದಳದ ಅಧಿಕಾರಿಯೊಬ್ಬರು ಹೇಳಿದ್ದರು.

ಅಗ್ನಿಶಾಮಕ ದಳ, ಶ್ವಾನ ದಳ, ಪೊಲೀಸ್ ಹಾಗೂ ಬಾಂಬ್ ಪತ್ತೆ ದಳ ಶಾಲೆಗಳಿಗೆ ಆಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದರು. ಡಿಸೆಂಬರ್ 9ರಂದು 44 ಶಾಲೆಗಳಿಗೆ ಬಾಂಬ್‌ ಬೆದರಿಕೆ ಹಾಕಲಾಗಿತ್ತು. ಪರಿಶೀಲನೆ ಬಳಿಕ ಅವು ಹುಸಿ ಕರೆಗಳೆಂದು ಪೊಲೀಸರು ದೃಢಪಡಿಸಿದ್ದರು.‌

ಈ ಸುದ್ದಿಯನ್ನೂ ಓದಿ:Singer TM Krishna: ಗಾಯಕ ಟಿ.ಎಂ.ಕೃಷ್ಣ ಅವರಿಗೆ ಎಂ.ಎಸ್‌.ಸುಬ್ಬುಲಕ್ಷ್ಮಿ ಪ್ರಶಸ್ತಿ; ಸುಪ್ರೀಂ ಕೋರ್ಟ್ ನಿಂದ ಮಧ್ಯಂತರ ತಡೆಯಾಜ್ಞೆ