Sunday, 15th December 2024

ಶತಾಯುಷಿ ತಾಯಿ ಹೀರಾಬೆನ್ ಪಾದಪೂಜೆ ಮಾಡಿದ ಪ್ರಧಾನಿ ಮೋದಿ

ನವದೆಹಲಿ: ನೂರನೇ ವಸಂತಕ್ಕೆ ಕಾಲಿಟ್ಟ ತಾಯಿ ಹೀರಾಬೆನ್​ ಅವರ ಪಾದಪೂಜೆ ಮಾಡಿ ಪ್ರಧಾನಿ ನರೇಂದ್ರ ಮೋದಿ ಆಶೀರ್ವಾದ ಪಡೆದರು. ‘

ನರೇಂದ್ರ ಮೋದಿ ಅವರ ತಾಯಿ ಹೀರಾಬೆನ್​ ಇಂದಿಗೆ (ಜೂ.18) 100ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಶತಾಯುಷಿ ತಾಯಿಯ ಹುಟ್ಟುಹಬ್ಬ ಹಿನ್ನೆಲೆ ಅಮ್ಮನಿಗೆ ಭಾವನಾತ್ಮಕ ವಾಗಿ ಸುದೀರ್ಘ ಪತ್ರ ಬರೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿರುವ ಪ್ರಧಾನಿ, ಬಾಲ್ಯದಲ್ಲಿನ ಅಮ್ಮನ ಜತೆಗಿನ ವಿಶೇಷ ಕ್ಷಣವನ್ನು ಮೆಲುಕು ಹಾಕಿದ್ದಾರೆ.