Sunday, 15th December 2024

ಮೌಂಟ್ ಮೇರಿ ಚರ್ಚ್ ಸ್ಫೋಟಿಸುವ ಬೆದರಿಕೆ: ವ್ಯಕ್ತಿ ಬಂಧನ

ಮುಂಬೈ: ವಾಣಿಜ್ಯ ನಗರಿ ಮುಂಬೈನ ಬಾಂದ್ರಾದಲ್ಲಿನ ಮೌಂಟ್ ಮೇರಿ ಚರ್ಚ್ ಸ್ಫೋಟಿ ಸುವುದಾಗಿ ಬೆದರಿಕೆ ಹಾಕಿದ ಆರೋಪ ದ ಮೇರೆಗೆ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.
ಚರ್ಚ್ ಸ್ಫೋಟಿಸುವುದಾಗಿ ಇ- ಮೇಲ್ ಕಳುಹಿಸಿದ ನಂತರ ಕೊಲ್ಕತ್ತಾದಲ್ಲಿ ಆರೋಪಿ ಯನ್ನು ಬಂಧಿಸಲಾಗಿದೆ ಎಂದು ಪೊಲಿಸರು ಸೋಮವಾರ ತಿಳಿಸಿದ್ದಾರೆ.
ಐಪಿ ವಿಳಾಸದ ಮೂಲಕ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ, ಬಂಧಿಸಿದ್ದಾರೆ. ಇ-ಮೇಲ್ ಯಾರು ಕಳುಹಿಸಿದ್ದಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ, ಎಲ್ಲವೂ ವಿಚಾರಣೆ ನಂತರ ತಿಳಿದುಬರಲಿದೆ ಎಂದು ಅವರು ಹೇಳಿದ್ದಾರೆ.
ಮೌಂಟ್ ಮೇರಿ ಚರ್ಚ್ ಮೇಲೆ ದಾಳಿ ನಡೆಸುವುದಾಗಿ ಉಗ್ರ ಸಂಘಟನೆ ಲಷ್ಕರ್- ಇ- ತೊಯ್ಬಾದಿಂದ ಡಿಸೆಂಬರ್ 30 ರಂದು ಇ-ಮೇಲ್ ನಿಂದ ಬೆದರಿಕೆ ಬಂದಿದ್ದು, ಅಪರಿಚಿತ ವ್ಯಕ್ತಿಗಳ ಪೊಲೀಸರು ಕೇಸ್ ದಾಖಲಿಸಿದ್ದಾರೆ. ನಂತರ ಬಂದ ಇ-ಮೇಲ್ ನಲ್ಲಿ , ತನ್ನ ಮಗ ಮಾನಸಿಕ ಅಸ್ವಸ್ಥನಾಗಿದ್ದು, ಈ ರೀತಿಯ ಸಂದೇಶ ಕಳುಹಿಸಿರುವುದಾಗಿ ಆತನ ತಾಯಿ ಹೇಳಿಕೊಂಡ ಮಹಿಳೆ ಯೊಬ್ಬರು ಕ್ಷಮೆಯಾಚಿಸಿದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Read E-Paper click here