ಭೋಪಾಲ್: ಪಿಕ್‌ನಿಕ್‌ಗೆಂದು ತೆರಳಿದ್ದ ಭಾರತೀಯ ಸೇನೆಯ(Indian army) ಇಬ್ಬರು ಅಧಿಕಾರಿಗಳ ಮೇಲೆ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿ ಅವರ ಜೊತೆಗಿದ್ದ ಸ್ನೇಹಿತೆ ಮೇಲೆ ಅತ್ಯಾಚಾರ(Physical Harassment) ಎಸಗಿರುವ ಘಟನೆ ಮಧ್ಯಪ್ರದೇಶ(MP Horror)ದಲ್ಲಿ ನಡೆದಿದೆ. ಇಲ್ಲಿನ ಇಂಧೋರ್ ಜಿಲ್ಲೆಯಲ್ಲಿ ಈ ಆಘಾತಕಾರಿ ಘಟನೆ ನಡೆದಿದ್ದು, ಈಗಾಗಲೇ ಇಬ್ಬರನ್ನು ಅರೆಸ್ಟ್ ಮಾಡಲಾಗಿದೆ.
ಮಧ್ಯಪ್ರದೇಶದ ಇಂದೋರ್ ಜಿಲ್ಲೆಯಲ್ಲಿ ಬುಧವಾರ ಇಬ್ಬರು ಸ್ನೇಹಿತೆಯರೊಂದಿಗೆ ಭಾರತೀಯ ಸೇನೆಯ ಯೋಧರು ಮೊವ್-ಮಂಡ್ಲೇಶ್ವರ ರಸ್ತೆಯಲ್ಲಿರುವ ಪಿಕ್ನಿಕ್ ಸ್ಥಳಕ್ಕೆ ಕಾರಿನಲ್ಲಿ ತೆರಳಿದ್ದರು. ಆ ಪ್ರವಾಸಿ ತಾಣದಲ್ಲಿ ಒಂದು ಜೋಡಿ ಕಾರಿನಲ್ಲಿಯೇ ಕುಳಿತು ಮಾತನಾಡುತ್ತಿದ್ದರು. ಆಗ ಅಲ್ಲಿಗೆ ಬಂದಿದ್ದ ಆರು ಜನ ದುಷ್ಕರ್ಮಿಗಳು ಅವರನ್ನು ಥಳಿಸಿದ್ದಾರೆ.
ಈ ಬಗ್ಗೆ ಬಡಗೊಂಡ ಪೊಲೀಸ್ ಠಾಣೆಯ ಉಸ್ತುವಾರಿ ಲೋಕೇಂದ್ರ ಸಿಂಗ್ ಹಿರೋರ್ ಮಾಹಿತಿ ನೀಡಿದ್ದು, ಮೋವ್ ಕಂಟೋನ್ಮೆಂಟ್ ಪಟ್ಟಣದ ಇನ್‌ಫೆಂಟ್ರಿ ಶಾಲೆಯಲ್ಲಿ ಯಂಗ್ ಆಫೀಸರ್ಸ್ (YO) ಕೋರ್ಸ್ ಪಡೆಯುತ್ತಿದ್ದ 23 ಮತ್ತು 24 ವರ್ಷ ವಯಸ್ಸಿನ ಯೋಧರು ತಮ್ಮ ಇಬ್ಬರು ಮಹಿಳಾ ಸ್ನೇಹಿತರೊಂದಿಗೆ ಮಂಗಳವಾರ ಪಿಕ್ನಿಕ್‌ಗೆ ತೆರಳಿದ್ದರು. ಬುಧವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ 6-7 ಜನರ ತಂಡವೊಂದು ಮೊವ್-ಮಂಡ್ಲೇಶ್ವರ ರಸ್ತೆಯಲ್ಲಿರುವ ಪಿಕ್ನಿಕ್ ಸ್ಥಳಕ್ಕೆ ಆಗಮಿಸಿ ಕಾರಿನಲ್ಲಿ ಕುಳಿತಿದ್ದ ಅಧಿಕಾರಿ ಹಾಗೂ ಮಹಿಳಾ ಸ್ನೇಹಿತೆಯೊಬ್ಬರಿಗೆ ಥಳಿಸಲು ಆರಂಭಿಸಿದೆ.
ಗದ್ದಲವನ್ನು ಕೇಳಿದ ಮತ್ತೊಂದು ಜೋಡಿ ಬೆಟ್ಟದ ಮೇಲಿಂದ ಓಡೋಡಿ ಬಂದಿದ್ದಾರೆ. ಆಗ ದಾಳಿಕೋರರು ತಾವು ದಾಳಿ ಮಾಡಿದ ಜೋಡಿಯನ್ನು ಕಾರಿನಲ್ಲಿ ಬಂದೂಕು ತೋರಿಸಿ ಒತ್ತೆಯಾಳಾಗಿ ಇಟ್ಟುಕೊಂಡಿದ್ದರು. ಮತ್ತೊಬ್ಬ ಯೋಧನಿಗೆ ₹10 ಲಕ್ಷ ಹಣ ತರುವಂತೆ ಬೇಡಿಕೆ ಇಟ್ಟಿದ್ದಾನೆ. ಅಲ್ಲಿಂದ ದುಡ್ಡು ತರಲೆಂದು ಬಂದಿದ್ದ ಯೋಧ ಈ ಅವಕಾಶವನ್ನು ಬಳಸಿಕೊಂಡು ಮೊವ್‌ನಲ್ಲಿನ ತನ್ನ ಹಿರಿಯರಿಗೆ ತಿಳಿಸಲು ಯಶಸ್ವಿಯಾಗಿದ್ದಾರೆ. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು ಪೊಲೀಸ್ ತಂಡವನ್ನು ಪ್ರದೇಶಕ್ಕೆ ಕಳುಹಿಸಲಾಯಿತು, ಆದರೆ ಅಷ್ಟರಲ್ಲಿ ದುಷ್ಕರ್ಮಿಗಳು ಕಾರಿನಲ್ಲಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿ ಯೋಧನ ಮೇಲೆ ದಾಳಿ ನಡೆಸಿ ಎಸ್ಕೇಪ್ ಆಗಿದ್ದಾರೆ.
ಕಾರಿನಲ್ಲಿದ್ದ ಯೋಧ ಮತ್ತು ಅವರ ಮಹಿಳೆಯನ್ನು ಮೊವ್ ಸಿವಿಲ್ ಆಸ್ಪತ್ರೆಗೆ ಕರೆತರಲಾಯಿತು, ಅಲ್ಲಿ ವೈದ್ಯಕೀಯ ಪರೀಕ್ಷೆಯಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ. ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 70 (ಸಾಮೂಹಿಕ ಅತ್ಯಾಚಾರ), 310-2 (ಡಕಾಯಿತಿ), 308-2 (ಸುಲಿಗೆ) ಮತ್ತು 115-2 (ಸ್ವಯಂಪ್ರೇರಿತವಾಗಿ ನೋವುಂಟುಮಾಡುವುದು) ಮತ್ತು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ
ಇದುವರೆಗೆ ಆರು ಶಂಕಿತರನ್ನು ಗುರುತಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರೂಪೇಶ್ ದ್ವಿವೇದಿ ಪತ್ರಿಕೆಗೆ ತಿಳಿಸಿದ್ದಾರೆ. ಅವರಲ್ಲಿ ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಒಬ್ಬರ ವಿರುದ್ಧ 2016 ರಲ್ಲಿ ಲೂಟಿ ಪ್ರಕರಣ ದಾಖಲಾಗಿದೆ ಎಂದು ಇಂದೋರ್ ಗ್ರಾಮಾಂತರ ಎಸ್ಪಿ ಹಿತಿಕಾ ವಾಸಲ್ ತಿಳಿಸಿದ್ದಾರೆ.
“ನಾವು ಇಬ್ಬರನ್ನು ಬಂಧಿಸಿದ್ದೇವೆ. ಅವರಲ್ಲಿ ಒಬ್ಬನ ವಿರುದ್ಧ 2016 ರಲ್ಲಿ ಲೂಟಿ ಪ್ರಕರಣ ದಾಖಲಾಗಿದೆ. ಇದು ಸಂಘಟಿತ ಗ್ಯಾಂಗ್ ಆಗಿರಲಿಲ್ಲ. ಅವರು ರಾತ್ರಿಯ ಸ್ಥಳದಲ್ಲಿ ಜಮಾಯಿಸಿದ ಈ ಯುವಕರನ್ನು ನೋಡಿ ಅವರ ಮೇಲೆ ದಾಳಿ ಮಾಡಲು ನಿರ್ಧರಿಸಿದರು. ಒಬ್ಬ ವ್ಯಕ್ತಿಯ ಮೇಲೆ ಪಿಸ್ತೂಲ್ ಕೂಡ ಇತ್ತು,” ಎಂದು ವಾಸಲ್ ಹೇಳಿದರು.
ಈ ಸುದ್ದಿಯನ್ನೂ ಓದಿ: ಸಾಮೂಹಿಕ ಅತ್ಯಾಚಾರ ಪ್ರಕರಣ: 10 ಮಂದಿಗೆ ಷರತ್ತುಬದ್ಧ ಜಾಮೀನು ಮಂಜೂರು