Sunday, 15th December 2024

ಸಂಸದೆ ಮಿಮಿ ಚಕ್ರವರ್ತಿಗೆ ಅನಾರೋಗ್ಯ

ಕೋಲ್ಕತಾ: ನಟಿ ಹಾಗೂ ಸಂಸದೆ ಮಿಮಿ ಚಕ್ರವರ್ತಿ ಅನಾರೋಗ್ಯಕ್ಕೆ ಒಳಗಾಗಿದ್ದಾರೆ. ನಕಲಿ ಕೋವಿಡ್ ಲಸಿಕೆ ಪಡೆದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.

ನಾಲ್ಕು ದಿನಗಳ ಹಿಂದೆ ತೆಗೆದುಕೊಂಡ ನಕಲಿ ಡೋಸ್ ಅನಾರೋಗ್ಯಕ್ಕೆ ಕಾರಣ ಎಂದು ಹೇಳಲು ಸಾಧ್ಯವಿಲ್ಲ. ಚಕ್ರವರ್ತಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದರು. ಕೂಡಲೇ ಅವರ ಕುಟುಂಬದ ವೈದ್ಯರನ್ನು ಕರೆಸಲಾಯಿತು ಎಂದು ಆಪ್ತ ಮೂಲಗಳು ತಿಳಿಸಿವೆ.

ಪಿತ್ತಕೋಶ ಮತ್ತು ಪಿತ್ತಜನಕಾಂಗಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ನಟಿ ಬಳಲುತ್ತಿದ್ದಾರೆ. ನಿರ್ಜಲೀಕರಣ, ಹೊಟ್ಟೆ ನೋವು ಮತ್ತು ರಕ್ತದೊತ್ತಡದಲ್ಲಿ ಏರಿಳಿಕೆಯಾಗುತ್ತಿದೆ ಎಂದು ಹೇಳಿದರು.

ಸದ್ಯ ಮಿಮಿ ಚಕ್ರವರ್ತಿ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಕೃತ್ತಿನ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಅವರ ಅನಾ ರೋಗ್ಯಕ್ಕೆ ನಕಲಿ ಲಸಿಕೆ ಕಾರಣ ಎಂದು ತಕ್ಷಣವೇ ನಿರ್ಧಾರಕ್ಕೆ ಬರಲು ಸಾಧ್ಯವಿಲ್ಲ ವೈದ್ಯರು ತಿಳಿಸಿದ್ದಾರೆ.

ಕೋಲ್ಕತ್ತಾದಲ್ಲಿ ನಾಗರಿಕ ಅಧಿಕಾರಿ ಸೋಗಿನಲ್ಲಿ ವ್ಯಕ್ತಿಯೋರ್ವ ಲಸಿಕೆ ಅಭಿಯಾನವನ್ನು ಆಯೋಜಿಸಿದ್ದು ಅದರಲ್ಲಿ ಮಿಮಿ ಚಕ್ರವರ್ತಿಗೆ ಲಸಿಕೆ ನೀಡಲಾಗಿತ್ತು.