ನವದೆಹಲಿ: ಜೈಲಿನಿಂದ ಸ್ಪರ್ಧಿಸಿ ಗೆದ್ದಿದ್ದ ಇಬ್ಬರು ಸಂಸದರು ಶುಕ್ರವಾರ ಸಂಸತ್ ನಲ್ಲಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಚುನಾಯಿತರಾಗಿರುವ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾ ಕ್ಷೇತ್ರದ ಸಂಸದ ಅಬ್ದುಲ್ ರಶೀದ್ ಹಾಗೂ ಪಂಜಾಬ್ ಖದೂರ್ ಸಾಹೀಬ್ ಕ್ಷೇತ್ರದ ಸಂಸದ ಅಮೃತ್ ಪಾಲ್ ಸಿಂಗ್ ಅವರು ಇಂದು ಸಂಸತ್ ನಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಭಯೋತ್ಪಾದಕರ ಪರವಾಗಿ ಹಣ ಸಂಗ್ರಹಿಸಿದ ಆರೋಪದಡಿ ಜೈಲು ಸೇರಿರುವ ಅಬ್ದುಲ್ ರಶೀದ್ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾರೆ. ಖಲಿಸ್ತಾನ್ ಸಂಘಟನೆ ಪರ ಒಲವು ತೋರಿದ ಆರೋಪದಡಿ ಜೈಲು ಸೇರಿರುವ ಅಮೃತ್ ಪಾಲ್ ಸಿಂಗ್ ಅವರನ್ನು ಅಸ್ಸಾಂನ ದಿಬ್ರುಗಢ ಕಾರಾಗೃಹದಲ್ಲಿ ಇರಿಸಲಾಗಿದೆ.
ಯುಎಪಿಎ ಪ್ರಕರಣದಲ್ಲಿ ಇಬ್ಬರು ಸಂಸದರು ಜೈಲಿನಲ್ಲಿದ್ದು, ಪ್ರಮಾಣವಚನ ಸ್ವೀಕರಿಸಲು ಅವರಿಗೆ ಅನುಮತಿ ನೀಡಲಾಗಿದೆ. ಹಲವು ಷರತ್ತು ವಿಧಿಸಿ ಜೈಲು ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಪೆರೋಲ್ ಮೇಲೆ ಜೈಲಿನಿಂದ ಹೊರಬಂದಿರುವ ಇಬ್ಬರೂ ಸಂಸದರು ಇಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.