ಮಲಪ್ಪುರಂ: ಕೇರಳದ ಮಲಪ್ಪುರಂನಲ್ಲಿ 38 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್(Mpox Virus) ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಇತ್ತೀಚೆಗಷ್ಟೇ ದುಬೈನಿಂದ ಮರಳಿದ ರೋಗಿಯಲ್ಲಿ ರೋಗದ ಲಕ್ಷಣಗಳು ಕಾಣಿಸಿಕೊಂಡಿದ್ದು, ಅವರನ್ನು ಮಲಪ್ಪುರಂ(Malappuram)ನ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪರೀಕ್ಷೆಯಲ್ಲಿ ಎಂಪಾಕ್ಸ್ ಸೋಂಕು ಎಂಬುದು ದೃಢವಾಗಿದೆ ಎಂದು ಆರೋಗ್ಯ ಇಲಾಖೆ ವರದಿ ನೀಡಿದೆ.
ಮಂಗಳವಾರ, ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸುದ್ದಿಗಾರರೊಂದಿಗೆ ಮಾತನಾಡಿ, ವ್ಯಕ್ತಿ ಹಿಂದಿರುಗಿದ ನಂತರ ಮನೆಯಲ್ಲಿ ಐಸೋಲೇಶನ್ ಮಾಡಲಾಗಿತ್ತು. ಅಲ್ಲದೇ ಮುನ್ನೆಚ್ಚರಿಕೆ ಕ್ರಮಗಳನ್ನುಕೈಗೊಳ್ಳಲಾಗಿದೆ. ರೋಗಿಯು ಕೆಲವು ದಿನಗಳ ಹಿಂದೆ ಕೇರಳಕ್ಕೆ ಆಗಮಿಸಿದ್ದು, ಅನಾರೋಗ್ಯದ ನಂತರ ಆತನನ್ನು ಆರಂಭದಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
“ಅಲ್ಲಿಂದ ಅವರನ್ನು ಮಂಜೇರಿ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಯಿತು. ಇದು ಮಂಕಿಪಾಕ್ಸ್ ಪ್ರಕರಣವಾಗಿರಬಹುದು ಎಂದು ಶಂಕಿಸಿ, ನಾವು ಅವರ ಮಾದರಿಗಳನ್ನು ಪರೀಕ್ಷೆಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ಕಳುಹಿಸಿದ್ದೆವು ಎಂದು ಹೇಳಿದ್ದಾರೆ. ಸಿಡುಬಿಗೆ ಸಂಬಂಧಿಸಿದ ವೈರಲ್ ಕಾಯಿಲೆಯಾದ Mpox, ಚರ್ಮದ ದದ್ದುಗಳು, ಜ್ವರ ಹೀಗೆ ಅನೇಕ ರೋಗ ಲಕ್ಷಣಗಳನ್ನು ಹೊಂದಿತ್ತು. ಇದು ಚರ್ಮದಿಂದ ಚರ್ಮಕ್ಕೆ ಹರಡುತ್ತಾ ಹೋಗುತ್ತದೆ. ಇದನ್ನು ನಿಯಂತ್ರಿಸಬಹುದು. ಆದರೂ ಇದು ಮಾರಕವಾಗಬಹುದು.
#Kerala Health Minister @VeenaGeorge03 confirmed today that a 38-year-old man from the UAE, who had been undergoing treatment for Mpox-like symptoms, has tested positive for #Mpox in Malappuram district.
— South First (@TheSouthfirst) September 18, 2024
The individual is currently under isolation and receiving care. The Health… pic.twitter.com/vJ77bC960u
ಎಂಪಾಕ್ಸ್ ವೈರಸ್ ಎಂದರೇನು?
ಎಂಪಾಕ್ಸ್ ವೈರಸ್ ಸಿಡುಬಿನ ವೈರಸ್‌ಗಳ ಕುಟುಂಬದ ಭಾಗವಾಗಿದೆ. ಇದನ್ನು ಮೊದಲು 1958 ರಲ್ಲಿ ಪ್ರಯೋಗಾಲಯ ಕೋತಿಗಳಲ್ಲಿ ಗುರುತಿಸಲಾಯಿತು. ನಂತರ ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ದೇಶಗಳ ಉಷ್ಣವಲಯದ ಮಳೆ ಕಾಡುಗಳಲ್ಲಿ ಈ ವೈರಸ್ ಕಂಡು ಬಂದಿದ್ದವು. ಸೋಂಕಿತ ವ್ಯಕ್ತಿ, ಕಲುಷಿತ ವಸ್ತುಗಳು ಅಥವಾ ಸೋಂಕಿತ ಪ್ರಾಣಿಗಳೊಂದಿಗೆ ನಿಕಟ ಸಂಪರ್ಕದಿಂದ ವೈರಸ್ ಹರಡಬಹುದು. ರೋಗಲಕ್ಷಣಗಳಲ್ಲಿ ಚರ್ಮದ ದದ್ದು, ಜ್ವರ, ತಲೆನೋವು, ಸ್ನಾಯು ನೋವು, ಬೆನ್ನು ನೋವು ಸೇರಿವೆ. ಇದು ಎರಡರಿಂದ ನಾಲ್ಕು ವಾರಗಳವರೆಗೆ ಇರುತ್ತದೆ.
ಇನ್ನು ವಯಸ್ಕರಲ್ಲಿ ಮಂಕಿ ಪಾಕ್ಸ್ ಸೋಂಕಿಗೆ ಲಸಿಕೆ ಬಳಸಲು (Mpox Vaccine) ವಿಶ್ವ ಆರೋಗ್ಯ ಸಂಸ್ಥೆ ಶುಕ್ರವಾರ ತನ್ನ ಮೊದಲ ಅವಕಾಶ ಕೊಟ್ಟಿದೆ. ಇದು ಆಫ್ರಿಕಾ ಸೇರಿದಂತೆ ಎಂಪಾಕ್ಸ್ ಸಮಸ್ಯೆ ಹೆಚ್ಚಿರುವ ಪ್ರದೇಶಗಳಲ್ಲಿ ಸೋಂಕಿನ ವಿರುದ್ಧ ಹೋರಾಡುವಲ್ಲಿ ಪ್ರಮುಖ ಹೆಜ್ಜೆಯಾಗಿದೆ. ಬವೇರಿಯನ್ ನಾರ್ಡಿಕ್ ಎ/ ಎಸ್ ಉತ್ಪಾದಿಸಿರುವ ಲಸಿಕೆಗೆ ಪೂರ್ವ ಅರ್ಹತೆ ಕೊಡಲಾಘಿದೆ. ಜಿಎವಿಐ- ವ್ಯಾಕ್ಸಿನ್ ಅಲೈಯನ್ಸ್ ಮತ್ತು ಯುನಿಸೆಫ್‌ನಂತ ದಾನಿಗಳು ಅದನ್ನು ಖರೀದಿಸಬಹುದು. ಸದ್ಯಕ್ಕೆ ಏಕೈಕ ಉತ್ಪಾಕರಿರುವ ಕಾರಣ. ವ್ಯಾಕ್ಸಿನ್ ಸರಬರಾಜು ಸೀಮಿತವಾಗಿದೆ.
ಎಂಪಾಕ್ಸ್ ವಿರುದ್ಧದ ಲಸಿಕೆಯ ಅರ್ಹತೆಯು ಆಫ್ರಿಕಾದಲ್ಲಿ ಪ್ರಸ್ತುತ ಏಕಾಏಕಿ ಮತ್ತು ಭವಿಷ್ಯದಲ್ಲಿ ರೋಗದ ವಿರುದ್ಧದ ನಮ್ಮ ಹೋರಾಟದಲ್ಲಿ ಒಂದು ಪ್ರಮುಖ ಹೆಜ್ಜೆ ಎಂದು ಡಬ್ಲ್ಯುಎಚ್ಒ ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಹೇಳಿದ್ದಾರೆ.
ಈ ಸುದ್ದಿಯನ್ನೂ ಓದಿ: Nipah Virus: ಕೇರಳದಲ್ಲಿ ನಿಫಾ ವೈರಸ್ ಹೈ ಅಲರ್ಟ್, ಮಾಸ್ಕ್ ಕಡ್ಡಾಯ, ಶಾಲೆಗಳಿಗೆ ರಜೆ