ಮುಜಫ್ಫರನಗರ: ರಹಮಾನ ಮಸೀದಿಯ ಹೊರಗಿನ ರಸ್ತೆಯಲ್ಲಿ ೨೫ ಮುಸಲ್ಮಾನರು ನಮಾಜ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ನಂತರ ಪೊಲೀಸರು ಈ ಪ್ರಕರಣದ ದೂರು ದಾಖಲಿಸಿದ್ದಾರೆ.
ಮಸೀದಿಯ ಇಮಾಂ ಮೌಲಾನಾ ನಸೀಮ್ ಇವನನ್ನು ಬಂಧಿಸಿದ್ದಾರೆ. ಪೊಲೀಸ ಆಯುಕ್ತ ಆಯುಶ್ ವಿಕ್ರಂ ಸಿಂಹ ಇವರು, ಭಾರತೀಯ ದಂಡ ಸಂಹಿತೆಯ ಕಲಂ ೩೪೧ ರ ಅಡಿಯಲ್ಲಿ ದೂರು ದಾಖಲಿಸಿದ್ದು ಇತರ ಮುಸಲ್ಮಾನರನ್ನು ವಿಡಿಯೋದ ಮೂಲಕ ಗುರುತಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಕಳೆದ ವರ್ಷ ರಸ್ತೆಯಲ್ಲಿ ನಮಾಜ್ ಗೆ ವಿರೋಧ ಮಾಡಿದ ನಂತರ ಅನೇಕ ಹಿಂದುತ್ವನಿಷ್ಟ ಸಂಘಟನೆಗಳಿಂದ ರಸ್ತೆಯ ಮೇಲೆ ಹನುಮಾನ ಚಾಲಿಸಾ ಮತ್ತು ಸುಂದರಕಾಂಡದ ಪಠಣೆ ಮಾಡಲು ಆರಂಭಿಸಿದ್ದರು. ಇದರಿಂದ ಉತ್ತರ ಪ್ರದೇಶ ಸಹಿತ ದೇಶದಲ್ಲಿನ ಕೆಲವು ರಾಜ್ಯಗಳಲ್ಲಿ ರಸ್ತೆಯಲ್ಲಿ ನಮಾಜ ನಿಷೇಧಿಸ ಲಾಗಿತ್ತು.