Sunday, 15th December 2024

ಟಿಎಂಸಿಗೆ ಮುಕುಲ್ ರಾಯ್ ’ಘರ್‌ ವಪ್ಸಿ’

ಕೋಲ್ಕತ್ತ: ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್, ತಮ್ಮ ಪುತ್ರನೊಂದಿಗೆ ಮತ್ತೆ ತೃಣಮೂಲ ಕಾಂಗ್ರೆಸ್ ಸೇರಿದ್ದಾರೆ.

ಕೋಲ್ಕತ್ತಾದಲ್ಲಿ ಪಕ್ಷದ ಹಿರಿಯ ಮುಖಂಡರನ್ನ ಭೇಟಿಯಾದ ನಂತರ ಮುಕುಲ್ ರಾಯ್ ಅವರ ಪುತ್ರ ಶುಭ್ರಂಶು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಸಮ್ಮುಖದಲ್ಲಿ ಪಕ್ಷವನ್ನ ಪುನಃ ಸೇರಿಕೊಂಡರು.

ತೃಣಮೂಲ ಕಾಂಗ್ರೆಸ್‌ನಲ್ಲಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಮುಕುಲ್ ರಾಯ್ ಅವರು 2017ರ ನವೆಂಬರ್‌ನಲ್ಲಿ ಬಿಜೆಪಿಗೆ ಸೇರಿದರು. ಕಳೆದ ಕೆಲವು ದಿನಗಳಿಂದ ಮುಕುಲ್ ರಾಯ್ ಬಿಜೆಪಿಯಿಂದ ದೂರ ಉಳಿದಿದ್ದು, ಈಗ ಮತ್ತೆ ಟಿಎಂಸಿ ಸೇರಿಕೊಂಡಿ ದ್ದಾರೆ.

ಇತ್ತೀಚೆಗೆ ಅಭಿಷೇಕ್ ಬ್ಯಾನರ್ಜಿಯನ್ನ ಪ್ರಧಾನ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ.