ಮಹಿಳೆ ಜೂನ್ 29 ರಂದು ತನ್ನ ಸಂಬಂಧಿಕರಿಗೆ ಹಣ ವರ್ಗಾಯಿಸಲು ಪ್ರಯತ್ನಿಸುತ್ತಿದ್ದಾಗ ಬ್ಯಾಂಕ್ ಖಾತೆ ಸಂಖ್ಯೆಯನ್ನು ತಪ್ಪಾಗಿ ನಮೂದಿಸಿದ್ದಳು. ಈ ಹಣ ಮುಂಬೈನಲ್ಲಿ ನೆಲೆಸಿ ರುವ ವ್ಯಕ್ತಿಯ ಖಾತೆಗೆ ಹಣ ವರ್ಗಾವಣೆಯಾಗಿದೆ.
ತಪ್ಪಾಗಿ ಹಣವನ್ನು ಬೇರೆಯವರಿಗೆ ಕಳುಹಿಸಿದ್ದು ಅರಿವಾದಾಗ, ಬ್ಯಾಂಕ್‌ಗೆ ಭೇಟಿ ನೀಡಿ ವಿಚಾರಿಸಿದ್ದಾಳೆ. ಬ್ಯಾಂಕ್‌ನವರು ಸಹಾಯ ಮಾಡಲು ನಿರಾಕರಿಸಿದರು. ಇದು ನಿಮ್ಮ ತಪ್ಪಾಗಿದೆ. ನಾವು ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ನಂತರ ಮಹಿಳೆ, ಸೈಬರ್ ಸೆಲ್ ಅನ್ನು ಸಂಪರ್ಕಿಸಿದರು. ಪೊಲೀಸರು ಖಾತೆದಾರರ ಸಂಪರ್ಕ ಮಾಹಿತಿ ಪತ್ತೆ ಹಚ್ಚಿದ್ದು, ಹಣ ಪಡೆದ ವ್ಯಕ್ತಿಗೆ ಹಣವನ್ನು ಹಿಂದಿರುಗಿಸುವಂತೆ ಮನವಿ ಮಾಡಿದ್ದಾರೆ. ಆತ ತನಗೆ ಲಾಟರಿ ಬಂದಿದೆ ಎಂದು ಹೇಳಿ ಹಣ ಹಿಂದಿರುಗಿಸಲು ನಿರಾಕರಿಸಿದ್ದಾನೆ.
ಹಣ ವಾಪಸ್ ನೀಡದಿದ್ದರೆ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದಾಗ, ಹಣವನ್ನು ಹಿಂತಿರುಗಿಸಲು ಒಪ್ಪಿಕೊಂಡರು.