Wednesday, 11th December 2024

ರಾಣಿ ಎಲಿಝಬೆತ್-2 ನಿಧನಕ್ಕೆ ಡಬ್ಬಾವಾಲಾ ಅಸೋಸಿಯೇಶನ್ ​​ಸಂತಾಪ

ಮುಂಬೈ: ಬ್ರಿಟನ್ ಇತಿಹಾಸದಲ್ಲಿ ಸುದೀರ್ಘ ಆಡಳಿತ ನಡೆಸಿದ ಹಾಗೂ ಅತಿ ಹೆಚ್ಚು ವರ್ಷ ಬದುಕಿದ ರಾಜವಂಶಸ್ಥೆ ಎನಿಸಿದ ರಾಣಿ ಎಲಿಝಬೆತ್-2 ನಿಧನಕ್ಕೆ ಮುಂಬೈ ಡಬ್ಬಾವಾಲಾ ಅಸೋಸಿಯೇಶನ್ ​​ಸಂತಾಪ ಸೂಚಿಸಿದೆ.

ಪ್ರಿನ್ಸ್ ಚಾರ್ಲ್ಸ್ ಭಾರತಕ್ಕೆ ಭೇಟಿ ನೀಡಿದ ನಂತರ ಮುಂಬೈ ಡಬ್ಬಾವಾಲಾಗಳು ಬ್ರಿಟಿಷ್ ರಾಜಮನೆತನದೊಂದಿಗೆ ಅತ್ಯಂತ ನಿಕಟ ಸಂಬಂಧ ಹೊಂದಿದ್ದಾರೆ ಎಂದು ಸಂಘದ ಅಧ್ಯಕ್ಷ ಸುಭಾಷ್ ತಾಲೇಕರ್ ಹೇಳಿದ್ದಾರೆ.

ರಾಣಿ ಎಲಿಝಬೆತ್ II ರ ಸಾವಿನ ಸುದ್ದಿ ಕೇಳಿ ನಮಗೆ ತುಂಬಾ ದುಃಖವಾಗಿದೆ ಮತ್ತು ಎಲ್ಲಾ ಡಬ್ಬಾವಾಲಾಗಳು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತಾರೆ” ಎಂದು ತಾಲೇಕರ್ ಹೇಳಿದರು.

ಗುರುವಾರ ಪ್ರಧಾನಿ ನರೇಂದ್ರ ಮೋದಿ ಅವರು ರಾಣಿ ಎಲಿಝಬೆತ್ ಅವರ ನಿಧನಕ್ಕೆ ಸಂತಾಪ ಸೂಚಿಸಿದರು ಹಾಗೂ ಅವರದ್ದು “ಸ್ಫೂರ್ತಿದಾಯಕ ನಾಯಕತ್ವ” ಎಂದು ಶ್ಲಾಘಿಸಿದರು.

ಪ್ರಧಾನ ಮಂತ್ರಿ ಅವರು 2015 ಹಾಗೂ 2018 ರಲ್ಲಿ ತಮ್ಮ ಬ್ರಿಟನ್ ಭೇಟಿಗಳಲ್ಲಿ ರಾಣಿಯೊಂದಿಗಿನ ಅವರ ಸ್ಮರಣೀಯ ಭೇಟಿ ಗಳನ್ನು ನೆನಪಿಸಿಕೊಂಡರು.