Friday, 20th September 2024

ವಾರಪತ್ರಿಕೆಯಾಗಿ ಮುಂಬೈ ಮಿರ‍್ರರ್‌

ಮುಂಬೈ: ಪ್ರಖ್ಯಾತ ಟ್ಯಾಬ್ಲೋಯ್ಡ್ ಪತ್ರಿಕೆ ಪುಣೆ ಮಿರ‍್ರರ್‌ ಮುದ್ರಣವನ್ನು ನಿಲ್ಲಿಸುತ್ತಿದ್ದು, ಮುಂಬೈ ಮಿರ‍್ರರ್‌ ಅನ್ನು ವಾರ ಪತ್ರಿಕೆಯಾಗಿ ಮರುಪ್ರಕಟಿಸಲು ನಿರ್ಧರಿಸಿದೆ. ಅಲ್ಲದೇ, ಆನ್‌ಲೈನ್‌ ಅವತರಣಿಕೆಗೆ ಪ್ರಾಮುಖ್ಯತೆ ನೀಡುವುದಾಗಿ ಟೈಮ್ಸ್‌ ಗ್ರೂಪ್‌ ತನ್ನ ಪ್ರಕರಣೆಯಲ್ಲಿ ತಿಳಿಸಿದೆ.

ಮುಂಬೈ ನಗರ ಯಾವತ್ತೂ ನಿದ್ರಿಸಲ್ಲ ಎಂಬಂತೆ ಸುಮಾರು 15 ವರ್ಷಗಳ ಹಿಂದೆ ಪ್ರಕಟಣೆಗೆ ಶುರುವಿಟ್ಟುಕೊಂಡ ಮುಂಬೈ ಮಿರ‍್ರರ್‌, ಈಗ ಸಂಸ್ಥೆಯ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸಲು ವಾರಪತ್ರಿಕೆ ರೂಪದಲ್ಲಿ ಇನ್ನೊಮ್ಮೆ ಓದುಗರ ಕೈಸೇರಲಿದೆ.

ಮುಂಬೈನಲ್ಲಿ ಆರಂಭವಾದ ಪತ್ರಿಕೆ, ಬಳಿಕ ತನ್ನ ಕಾರ್ಯಭಾರವನ್ನು ಅಹಮದಾಬಾದ್‌, ಬೆಂಗಳೂರು ಹಾಗೂ ಪುಣೆಯಂತಹ ನಗರಗಳತ್ತ ಚಾಚಿತು. ಆದರೆ, ಈ ಪತ್ರಿಕೆ ತನ್ನ ಬೇರನ್ನು ತಳಮಟ್ಟದಲ್ಲಿ ಚಾಚುವ ಮುನ್ನವೇ, ಲಾಕ್‌ಡೌನ್‌ ಹಾಗೂ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿದ್ದು ಮಾತ್ರವಲ್ಲದೇ, ಮುದ್ರಣಕ್ಕೆ ಬಳಸುವ ಕಾಗದಗಳ ಆಮದು ಸುಂಕದಲ್ಲಿ ಹೆಚ್ಚಳವಾಗಿರುವ ಕಾರಣ, ಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆಯೆನ್ನಲಾಗಿದೆ.