Friday, 27th September 2024

Mumbai Rain: ಮುಂಬೈ ವರುಣಾರ್ಭಟಕ್ಕೆ ನಾಲ್ವರು ಬಲಿ; ಪುಣೆಯಲ್ಲಿ ಮೋದಿ ಕಾರ್ಯಕ್ರಮ ರದ್ದು

Heavy Rain

ಮುಂಬೈ: ನಿನ್ನೆ ಮಧ್ಯಾಹ್ನದಿಂದ ಎಡೆಬಿಡದೇ ಸುರಿಯುತ್ತಿರುವ ಭಾರೀ ಮಳೆ(Mumbai Rain)ಗೆ ಮುಂಬೈನಲ್ಲಿ ಪ್ರವಾಹ(Flood) ಸ್ಥಿತಿ ನಿರ್ಮಾಣವಾಗಿದೆ. ಇನ್ನು ಭಾರೀ ಮಳೆಗೆ ನಾಲ್ವರು ಸಾವನ್ನಪ್ಪಿದ್ದು, ಶಾಲಾ ಕಾಲೇಜುಗೆ ರಜೆ ಘೋಷಿಸಲಾಗಿದೆ. ಮುಂಬೈನ ಕೆಲವು ಭಾಗಗಳಲ್ಲಿ ಬುಧವಾರ ಸಂಜೆ ಸುಮಾರು 275 ಮಿಮೀ (11 ಇಂಚುಗಳು) ಮಳೆ ದಾಖಲಾಗಿದೆ, ಭಾರೀ ಮಳೆಗೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಲಕ್ಷಾಂತರ ನಿವಾಸಿಗಳು ಪ್ರತಿದಿನ ಬಳಸುವ ಮುಂಬೈ ಲೋಕಲ್‌ ರೈಲು ಸಂಚಾರ ವಿಳಂಬಗೊಂಡಿತ್ತು. ಮತ್ತೊಂದೆಡೆ ಪ್ರತಿಕೂಲ ಹವಾಮಾನದಿಂದಾಗಿ ವಿಮಾನ ಸಂಚಾರದಲ್ಲೂ ವ್ಯತ್ಯಯ ಉಂಟಾಗಿದೆ.

ಭಾರತೀಯ ಹವಾಮಾನ ಇಲಾಖೆ (IMD) ಮುಂಬೈನಲ್ಲಿ ಭಾರೀ ಮಳೆಯ ಎಚ್ಚರಿಕೆ ನೀಡಿದ್ದು, ಮುಂಬೈ ಸೇರಿದಂತೆ ಹಲವು ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಿದೆ. IMD ಮುನ್ಸೂಚನೆಯನ್ನು ಅನುಸರಿಸಿ ನಗರ ಆಡಳಿತವು ಮುಂಬೈನ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಭಾರೀ ಮಳೆಯಿಂದಾಗಿ ಪುಣೆಯಲ್ಲೂ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ.

ಪ್ರಧಾನಿ ಮೋದಿ ಪುಣೆ ಭೇಟಿ ರದ್ದು

ಭಾರೀ ಮಳೆಯಿಂದಾಗಿ ಪ್ರಧಾನಿ ನರೇಂದ್ರ ಮೋದಿಯವರ ಪುಣೆ ಭೇಟಿಯನ್ನು ರದ್ದುಗೊಳಿಸಲಾಗಿದೆ. ಪುಣೆ ಮೆಟ್ರೋದ ಹೊಸ ಕಾರಿಡಾರ್ ಅನ್ನು ಉದ್ಘಾಟಿಸಲು ಪ್ರಧಾನಿ ಮೋದಿಯವರ ಆಗಮಿಸಬೇಕಿತ್ತು. ಮಳೆಯ ಕಾರಣ ಪುಣೆ ಪ್ರವಾಸವನ್ನು ರದ್ದುಗೊಳಿಸಲಾಯಿತು. ಎಸ್ಪಿ ಕಾಲೇಜು ಮೈದಾನದಲ್ಲಿ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರೊಂದಿಗೆ ಪ್ರಧಾನಿ ಅವರಿಗೆ ಅದ್ದೂರಿ ಸ್ವಾಗತಕ್ಕೆ ಸಿದ್ಧತೆ ನಡೆಸಲಾಗಿತ್ತು.ಮಳೆಯಿಂದಾಗಿ ಈ ಸಾರ್ವಜನಿಕ ರ‍್ಯಾಲಿಯನ್ನು ರದ್ದುಗೊಳಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಈ ಸುದ್ದಿಯನ್ನೂ ಓದಿ: Heavy Rain: ಮುಂಬೈ ಸೇರಿದಂತೆ ಮಹಾರಾಷ್ಟ್ರದೆಲ್ಲೆಡೆ ಭಾರೀ ಮಳೆ; ರೈಲು, ವಿಮಾನ ಸಂಚಾರ ರದ್ದು