Sunday, 15th December 2024

ಮುಂಬೈ ಶೇರುಪೇಟೆಯ ಆರಂಭಿಕ ವಹಿವಾಟು ಭರ್ಜರಿ

ಮುಂಬೈ: ಜಾಗತಿಕ ಮಾರುಕಟ್ಟೆಯ ಚೇತರಿಕೆ ಹಾಗೂ ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ಮುಂಬೈ ಶೇರುಪೇಟೆಯ ಆರಂಭಿಕ ವಹಿವಾಟು ಭರ್ಜರಿಯಾಗಿ ಆರಂಭಗೊಂಡಿದ್ದು, ಎನ್ ಎಸ್ ಇ ನಿಫ್ಟಿ ಇದೇ ಮೊದಲ ಬಾರಿಗೆ 13,000ಅಂಕಗಳಿಗೆ ತಲುಪಿದೆ.

ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ ಸೂಚ್ಯಂಕ 370.53 ಅಂಕಗಳ ಏರಿಕೆಯೊಂದಿಗೆ ಪ್ರಸ್ತುತ 44,447.67 ಅಂಕಗಳ ವಹಿವಾಟು ನಡೆದಿದೆ. ಇದೇ ಮೊದಲ ಬಾರಿಗೆ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 106.20 ಅಂಕಗಳ ಏರಿಕೆಯೊಂದಿಗೆ 13,032.65 ಅಂಕಗಳಿಗೆ ತಲುಪಿದೆ.

ಮುಂಬೈ ಶೇರು ಮಾರುಕಟ್ಟೆ ವಹಿವಾಟು 194.90 ಅಂಕಗಳ ಏರಿಕೆಯೊಂದಿಗೆ 44,077.15 ಅಂಕಗಳೊಂದಿಗೆ ವಹಿವಾಟು ಅಂತ್ಯ ಗೊಂಡಿತ್ತು. ರಾಷ್ಟ್ರೀಯ ಶೇರು ಮಾರುಕಟ್ಟೆ ನಿಫ್ಟಿ ಸೂಚ್ಯಂಕ 67.40 ಅಂಕಗಳೊಂದಿಗೆ 12,926.45 ಅಂಕಗಳೊಂದಿಗೆ ವಹಿವಾಟು ಮುಕ್ತಾವಾಗಿತ್ತು.