Friday, 21st June 2024

ಗೀಸರ್‌ನಿಂದ ಗ್ಯಾಸ್ ಸೋರಿಕೆ: ನವವಿವಾಹಿತರ ಸಾವು

ಮುಂಬೈ: ಗೀಸರ್ ಗ್ಯಾಸ್ ಸೋರಿಕೆಯಿಂದ ನವವಿವಾಹಿತರು ಮೃತಪಟ್ಟಿದ್ದಾರೆ.

ದೀಪಕ್ ಷಾ ಮತ್ತು ಟೀನಾ ಶಾ ಮೃತರು. ಮುಂಬೈನ ಘಾಟ್ಕೋಪರ್ ಪ್ರದೇಶದಲ್ಲಿ ಬಾತ್‌ರೂಮ್‌ನಲ್ಲಿ ಅನುಮಾ ನಾಸ್ಪದ ಸ್ಥಿತಿಯಲ್ಲಿ ನವ ವಿವಾಹಿತರ ಶವ ಪತ್ತೆಯಾಗಿದೆ. ಹೋಳಿ ಹಬ್ಬದ ಬಳಿಕ ಸ್ನಾನಕ್ಕೆಂದು ತೆರಳಿದ ಇಬ್ಬರು ಗ್ಯಾಸ್ ಸೋರಿಕೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಪೊಲೀಸರ ಪ್ರಕಾರ, ದಂಪತಿ ಬಾಡಿಗೆಗೆ ಮನೆಯಲ್ಲಿ ವಾಸಿಸುತ್ತಿದ್ದರು. ಹೋಳಿ ಹಬ್ಬದ ಬಳಿಕ ಸ್ನಾನಕ್ಕೆಂದು ಗೀಸರ್ ಆನ್ ಮಾಡಿದ್ದರು. ಮನೆಯ ಬಾತ್ ರೂಮ್​​ನಲ್ಲಿದ್ದ ಗೀಸರ್ ನಿಂದ ಗ್ಯಾಸ್ ಸೋರಿಕೆಯಾಗಿ ಇಬ್ಬರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ. ಶಾ ಅವರ ಮನೆಗೆ ಕೆಲಸಕ್ಕೆ ಬರುತ್ತಿದ್ದ ಮಹಿಳೆ ಯೊಬ್ಬರು ಕಾಲಿಂಗ್‌ಬೆಲ್‌ ಬಾರಿಸಿ ದರೂ ಯಾರೂ ಬಾಗಿಲು ತೆರೆಯಲಿಲ್ಲ. ಈ ಮಾಹಿತಿಯನ್ನು ಪೊಲೀಸರಿಗೆ ನೀಡಲಾಯಿತು.

ಪೊಲೀಸರು ಡುಪ್ಲಿಕೇಟ್ ಕೀಲಿಯಿಂದ ಬಾಗಿಲು ತೆರೆದಾಗ ಬಾತ್ ರೂಮ್‌ನಲ್ಲಿ ದಂಪತಿ ಪ್ರಜ್ಞಾಹೀನ ಸ್ಥಿತಿಯಲ್ಲಿ ದ್ದರು. ಈ ಪ್ರಕರಣದಲ್ಲಿ ಆಕಸ್ಮಿಕ ಸಾವು ದಾಖಲಿಸಿಕೊಂಡಿ ದ್ದಾರೆ.

error: Content is protected !!