Saturday, 14th December 2024

ಸೆ.17-19 ರಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಯು.ಕೆ ಭೇಟಿ

ವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ರಾಣಿ ಎರಡನೇ ಎಲಿಜ ಬೆತ್ ಅವರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಯುನೈಟೆಡ್ ಕಿಂಗ್ ಡಮ್ ಗೆ ತೆರಳಲಿದ್ದಾರೆ.

ಮುರ್ಮು ಅವರು ಸೆಪ್ಟೆಂಬರ್ 17-19 ರಂದು ಯುನೈಟೆಡ್ ಕಿಂಗ್ಡಮ್ನ ಲಂಡನ್ಗೆ ಭೇಟಿ ನೀಡಲಿದ್ದು, ಭಾರತ ಸರ್ಕಾರದ ಪರವಾಗಿ ಸಂತಾಪ ಸೂಚಿಸಲಿದ್ದಾರೆ.

ಸೆ.19 ರಂದು ವೆಸ್ಟ್ ಮಿನಿಸ್ಟರ್ ಅಬ್ಬೆಯಲ್ಲಿ 2,000 ವಿಐಪಿ ಅತಿಥಿಗಳ ಸಮ್ಮುಖದಲ್ಲಿ ರಾಣಿಯ ಅಂತ್ಯಕ್ರಿಯೆ ನಡೆಯಲಿದೆ. ಈ ದಿನವನ್ನು ಬ್ರಿಟನ್ ನಲ್ಲಿ ಸಾರ್ವಜನಿಕ ರಜಾದಿನವೆಂದು ಘೋಷಿಸಲಾಗಿದೆ.

ಬ್ರಿಟನ್ ನ ದಿವಂಗತ ರಾಣಿ ಎಲಿಜಬೆತ್ ಅವರ ಪಾರ್ಥಿವ ಶರೀರವು ಮಂಗಳವಾರ ಸಂಜೆ ಸ್ಕಾಟ್ಲೆಂಡ್ ನಿಂದ ಲಂಡನ್ ಗೆ ಆಗ ಮಿಸಿದೆ. ಅವರ ಶವಪೆಟ್ಟಿಗೆಯನ್ನು ಅಂತಿಮ ರಾತ್ರಿ ಬಕಿಂಗ್ಹ್ಯಾಮ್ ಅರಮನೆಯಲ್ಲಿ ಇರಿಸಲಾಗುವುದು. ರಾಣಿಯ ಶವಪೆಟ್ಟಿಗೆ ಯನ್ನು ಬುಧವಾರದಿಂದ ನಾಲ್ಕು ದಿನಗಳ ಕಾಲ ವೆಸ್ಟ್ ಮಿನಿಸ್ಟರ್ ಹಾಲ್ ನಲ್ಲಿ ಇರಿಸಲಾಗುವುದು ಮತ್ತು ಸೋಮವಾರ ಅಂತ್ಯಕ್ರಿಯೆ ನಡೆಯಲಿದೆ.

ರಾಣಿ ತನ್ನ 96 ನೇ ವಯಸ್ಸಿನಲ್ಲಿ ಗುರುವಾರ ಬಾಲ್ಮೊರಲ್ ಕೋಟೆಯಲ್ಲಿ ನಿಧನರಾದರು. ಅವರು 70 ವರ್ಷಗಳ ಕಾಲ ಬ್ರಿಟನ್ ಅನ್ನು ಆಳಿದ್ದಾರೆ.