Saturday, 14th December 2024

ಫ್ಯಾಷನ್ ಬ್ರಾಂಡ್ ಮಿಂತ್ರಾ ಒದಗಿಸುತ್ತದೆ ಉದ್ಯೋಗಾವಕಾಶ..

ನವದೆಹಲಿ: ಸೋಂಕು ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಮತ್ತೆ ಎಂದಿನ ವೈಭವವನ್ನು ಪಡೆದುಕೊಂಡಿವೆ.

ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಫ್ಯಾಷನ್ ಬ್ರಾಂಡ್ ಮಿಂತ್ರಾ ಗುಡ್ ನ್ಯೂಸ್ ನೀಡಿದೆ. 16,000ಕ್ಕೂ ಅಧಿಕ ಮಂದಿಯ ನೇಮಕಕ್ಕೆ ಮಿಂತ್ರಾ ಮುಂದಾಗಿದ್ದು, ಈ ಪೈಕಿ 10,000 ಹುದ್ದೆಗಳು ನೇರ ನೇಮಕಗಳಾಗಿವೆ. ಉಳಿದ 6000 ಮಂದಿ ಪರೋಕ್ಷವಾಗಿ ಕಾರ್ಯನಿರ್ವಹಿಸಲಿದ್ದಾರೆ.

ಕಳೆದ ವರ್ಷವೂ ಮಿಂತ್ರಾ ಹಬ್ಬದ ಸಂದರ್ಭ 11,000 ಮಂದಿಯನ್ನು ನೇಮಕ ಮಾಡಿಕೊಂಡಿದ್ದು, ಆದರೆ ಕೇವಲ 7000 ಮಂದಿ ಮಾತ್ರ ನೇರ ನೇಮಕಕ್ಕೆ ಒಳಪಟ್ಟಿದ್ದರು. ಪ್ರಸ್ತುತ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮಿಂತ್ರಾ ದೊಡ್ಡ ಮಟ್ಟದ ನೇಮಕಕ್ಕೆ ಮುಂದಾಗಿದೆ.