ನವದೆಹಲಿ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಪಶ್ಚಿಮ ಬಂಗಾಳದಲ್ಲಿ ಪಕ್ಷದ ರಥಯಾತ್ರೆ ನಡೆಸಲು ಸಿದ್ಧತೆ ನಡೆಸಿದ್ದಾರೆ.
ಕೇಂದ್ರ ಗೃಹ ಸಚವ ಅಮಿತ್ ಶಾ ಅವರು ತಿಂಗಳ ಅಂತ್ಯದಲ್ಲಿ ಐದು ಉದ್ದೇಶಿತ ಯಾತ್ರೆಗಳಲ್ಲಿ ಎರಡು ಯಾತ್ರೆಗಳನ್ನು ಉದ್ಘಾಟಿಸಲಿದ್ದಾರೆ. ನಡ್ಡಾ ಮಾಲ್ಡಾಕ್ಕೆ ಭೇಟಿ ನೀಡಿ ರೋಡ್ ಶೋ ಹಾಗೂ ಜಿಲ್ಲೆಯ ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸ ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಮಧ್ಯಾಹ್ನ ರಥಯಾತ್ರೆಗೆ ಚಾಲನೆ ನೀಡಲಿದ್ದಾರೆ’ ನಬಾದ್ವಿಪ್ ನಿಂದ ಆರಂಭವಾಗುವ ಯಾತ್ರೆಗೆ ಪರಿವರ್ತನ್ ಯಾತ್ರೆ ಎಂದು ಹೆಸರಿಸಲಾಗಿದೆ.
ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಮುಕುಲ್ ರಾಯ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶುಕ್ರವಾರ ರಾತ್ರಿ ವಿಮಾನ ನಿಲ್ದಾಣದಲ್ಲಿ ನಡ್ಡಾ ಅವರನ್ನು ಬರಮಾಡಿಕೊಂಡರು.
ಸಂತ ಚೈತನ್ಯ ಮಹಾಪ್ರಭುಗಳ ಜನ್ಮಸ್ಥಳ ನಾಡಿಯಾ ಜಿಲ್ಲೆಯ ನಬದ್ವಿಪ್ ನಿಂದ ಶನಿವಾರ ನಡ್ಡಾ ‘ಪರಿವರ್ತನ ಯಾತ್ರೆ’ಯನ್ನು ಆರಂಭಿಸಲಿರುವುದಾಗಿ ವರದಿಗಳು ತಿಳಿಸಿವೆ.
ಬಿಜೆಪಿಯ ಹಲವು ಹಿರಿಯ ನಾಯಕರು ಶನಿವಾರ ನಾಡಿಯಾದಿಂದ ಆರಂಭವಾಗಲಿರುವ ರಥಯಾತ್ರೆಗಳಲ್ಲಿ ಭಾಗಿಯಾಗಲು ಒಂದು ತಿಂಗಳ ಕಾಲ ಪಶ್ಚಿಮ ಬಂಗಾಳಕ್ಕೆ ಆಗಮಿಸಲಿದ್ದಾರೆ.
ಫೆಬ್ರವರಿ 6 ರಿಂದ 11ರ ವರೆಗೆ ಕೂಚ್ ಬೆಹರ್, ದಕ್ಷಿಣ 24 ಪರಗಣದ ಕಾಕಡ್ವಿಪ್, ಜಾರ್ಗ್ರಾಮ್ ಮತ್ತು ತಾರಾಪೀಠದಿಂದ ಬಿರ್ಭುಮ್ ನಲ್ಲಿ ಇದೇ ರೀತಿಯ ಯಾತ್ರೆಗಳನ್ನು ಆರಂಭಿಸಲು ಪಕ್ಷ ಉದ್ದೇಶಿಸಿದೆ.