Sunday, 15th December 2024

ಸತ್ಯ ನಾಡೆಲ್ಲಾ ಪುತ್ರ ಝೈನ್ ನಾಡೆಲ್ಲಾ ನಿಧನ

ವದೆಹಲಿ: ಮೈಕ್ರೋಸಾಫ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸತ್ಯ ನಾಡೆಲ್ಲಾ ಅವರ ಪುತ್ರ ಝೈನ್ ನಾಡೆಲ್ಲಾ ( 26) ನಿಧನರಾದರು ಎಂದು ಮೈಕ್ರೋಸಾಫ್ಟ್ ಕಾರ್ಪ್ ಹೇಳಿದೆ.

ಅಂಗವೈಕಲ್ಯದಿಂದ ಬಳಲುತ್ತಾ, ಅಂಗವಿಕಲರಿಗಾಗಿ ವಿವಿಧ ಸಾಫ್ಟ್ ವೇರ್ ಅಭಿವೃದ್ಧಿ ಕೆಲಸದಲ್ಲಿ ನಿರತವಾಗಿದ್ದ ಸತ್ಯ ನಾಡೆಲ್ಲಾ ಅವರ ಪುತ್ರ ಝೈನ್ ನಾಡೆಲ್ಲಾ ಸೋಮವಾರ ನಿಧನರಾಗಿದ್ದಾರೆ.

2014 ರಲ್ಲಿ ಸಿಇಒ ಪಾತ್ರವನ್ನು ವಹಿಸಿಕೊಂಡಾಗಿನಿಂದ, ನಾಡೆಲ್ಲಾ ಅವರು ಅಂಗವೈಕಲ್ಯ ಹೊಂದಿ ರುವ ಬಳಕೆದಾರರಿಗೆ ಉತ್ತಮ ಸೇವೆ ನೀಡಲು ಉತ್ಪನ್ನಗಳನ್ನು ವಿನ್ಯಾಸಗೊಳಿಸುವತ್ತ ಕಂಪನಿಯನ್ನು ಕೇಂದ್ರೀಕರಿಸಿದ್ದರು.

ಝೈನ್ ಹೆಚ್ಚಿನ ಚಿಕಿತ್ಸೆಯ ಬಳಿಕ, ಸಿಯಾಟಲ್ ಚಿಲ್ಡ್ರನ್ಸ್ ಸೆಂಟರ್ ಫಾರ್ ಇಂಟಿಗ್ರೇಟಿವ್ ಬ್ರೈನ್ ರಿಸರ್ಚ್ ನ ಭಾಗವಾಗಿ, ಪೀಡಿಯಾಟ್ರಿಕ್ ನ್ಯೂರೋ ಸೈನ್ಸ್ ನಲ್ಲಿ ಎಗ್ಯುಂಟೆಡ್ ಚೇರ್ ಅನ್ನು ಅಭಿವೃದ್ಧಿ ಪಡಿಸಿದ್ದರು.