ಹೈದರಾಬಾದ್: ನಾಂಪಲ್ಲಿ ಬಜಾರ್ ಘಾಟ್‌ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಏಳು ಮಂದಿ ಮೃತಪಟ್ಟಿದ್ದಾರೆ.
ನಾಲ್ಕು ಅಂತಸ್ತಿನ ರಾಸಾಯನಿಕ ಗೋದಾಮಿನಲ್ಲಿ ಭಾರೀ ಬೆಂಕಿ ಕಾಣಿಸಿಕೊಂಡಿದ್ದು, ಗೋದಾಮಿನೊಳಗೆ ಇನ್ನೂ 10 ಕಾರ್ಮಿಕರು ಸಿಲುಕಿರುವ ಶಂಕೆ ಇದೆ ಎಂದು ವರದಿಯಾಗಿದೆ.
ಅವಘಡದಲ್ಲಿ ಗೋದಾಮಿನಲ್ಲಿದ್ದ ಕಾರು ಹಾಗೂ ಎರಡು ಸೈಕಲ್ ಸುಟ್ಟು ಕರಕಲಾಗಿವೆ. ಮಾಹಿತಿ ಪಡೆದ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ 4 ಅಗ್ನಿಶಾಮಕ ಯಂತ್ರಗಳ ಮೂಲಕ ಬೆಂಕಿ ನಂದಿಸುತ್ತಿದ್ದಾರೆ. ವಿಷಯ ತಿಳಿದು ಜಿಎಚ್‌ಎಂಸಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಆಗಮಿಸಿ ಪರಿಹಾರ ಕ್ರಮ ಕೈಗೊಂಡಿದ್ದಾರೆ.