ನವದೆಹಲಿ: ಕಳೆದ 10 ವರ್ಷಗಳಲ್ಲಿ ಹಿಂಗಾರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (MSP) ಬಹುತೇಕ ದ್ವಿಗುಣಗೊಂಡಿದೆ ಎಂದು ಕೇಂದ್ರ ಸರ್ಕಾರ ಬುಧವಾರ ಹೇಳಿದೆ. 2014-15ರಲ್ಲಿ ಪ್ರತಿ ಕ್ವಿಂಟಲ್‌ಗೆ 1,400 ರೂ.ಗಳಷ್ಟಿದ್ದ ಗೋಧಿಗೆ ಸರ್ಕಾರವು ಪ್ರತಿ ಕ್ವಿಂಟಲ್‌ಗೆ 2,425 ರೂ.ಗಳ ಬೆಂಬಲ ಬೆಲೆ ನೀಡುತ್ತಿದೆ. ಕಳೆದ ದಶಕದಿಂದ ಶೇಕಡಾ 73 ಕ್ಕಿಂತ ಹೆಚ್ಚಾಗಿದೆ. ಬೇಳೆಕಾಳು ಬೆಳೆಗೆ ಕನಿಷ್ಠ ಬೆಂಬಲ ಬೆಲೆ 6,700 ರೂಪಾಯಿ ನೀಡುತ್ತಿದ್ದು. ಇದು 2014-15ರಲ್ಲಿದ್ದ ಸಂಖ್ಯೆಗಿಂತ 2.3 ಪಟ್ಟು ಹೆಚ್ಚಾಗಿದೆ ಎಂದು ಸರ್ಕಾರ ಹೇಳಿದೆ.
ಗ್ರೇಪಿಡ್ಸ್ ಮತ್ತು ಸಾಸಿವೆಯ ಬೆಂಬಲ ಬೆಲೆಯನ್ನು 5,950 ರೂ.ಗೆ ಹೆಚ್ಚಿಸಲಾಗಿದೆ ಮತ್ತು ಕುಸುಬೆಗೆ 5,950 ರೂಪಾಯಿಗೆ ಇಳಿದಿದೆ. ಇದು 2014-15ರಲ್ಲಿದ್ದಕ್ಕಿಂತ ಎರಡು ಪಟ್ಟು ಹೆಚ್ಚಾಗಿದೆ. ಕಡಲೆ ಮತ್ತು ಬಾರ್ಲಿಯಂಥ ಇತರ ರಾಬಿ ಬೆಳೆಗಳಿಗೆ ಕಳೆದ ದಶಕದಲ್ಲಿ ಸುಮಾರು 1.8 ಪಟ್ಟು ಬೆಂಬಲ ಬೆಲೆ ಏರಿಕೆಯಾಗಿದೆ.
2018-19ರ ಕೇಂದ್ರ ಬಜೆಟ್‌ನಲ್ಲಿ ಬೆಂಬಲ ಬೆಲೆಯನ್ನು ತೂಕದ ಸರಾಸರಿ ಉತ್ಪಾದನಾ ವೆಚ್ಚದ ಕನಿಷ್ಠ 1.5 ಪಟ್ಟು ನಿಗದಿಪಡಿಸುವ ದೊಡ್ಡ ಘೋಷಣೆ ಮಾಡಲಾಗಿತ್ತು. ನರೇಂದ್ರ ಮೋದಿ ಆಡಳಿತದಲ್ಲಿ ರಾಬಿ ಮತ್ತು ಖಾರಿಫ್ ಬೆಳೆಗಳ ಬೆಂಬಲ ಬೆಲೆಯಲ್ಲಿ ಸ್ಥಿರ ಹೆಚ್ಚಳ ಕಂಡುಬಂದಿದೆ.
ಅಶ್ವಿನ್ ವೈಷ್ಣವ್ ಹೇಳಿದ್ದೇನು?
ಪ್ರತಿಪಕ್ಷಗಳು ಬೆಂಬಲ ಬೆಲೆ ಕುರಿತು ನಕಲಿ ನಿರೂಪಣೆ ನೀಡುತ್ತಿದ್ದಾರೆ. ಈ ಅಂಕಿಅಂಶಗಳನ್ನು ಅಂತಹ ಜನರ ಮುಂದೆ ಪ್ರಸ್ತುತಪಡಿಸಬೇಕು. ಇದು ರೈತರ ಆದಾಯ ನಿಜವಾದ ಕಲ್ಯಾಣಕ್ಕೆ ಬಹಳ ದೊಡ್ಡ ಕೊಡುಗೆ ಎಂದು ಸಚಿವ ಅಶ್ವಿನಿ ವೈಷ್ಣವ್ ಬುಧವಾರ ಹೇಳಿದ್ದಾರೆ.
ಇದನ್ನೂ ಓದಿ: Omar Abdullah : ಉಮರ್ ಅಬ್ದುಲ್ಲಾ ಸರ್ಕಾರದಲ್ಲಿ ಸುರೇಂದರ್ ಚೌಧರಿ ಡಿಸಿಎಂ ಆಗಿದ್ದು ಯಾಕೆ? ಅದಕ್ಕೊಂದು ಕಾರಣವಿದೆ
ರೈತರ ಕಲ್ಯಾಣಕ್ಕಾಗಿ ಸಮರ್ಪಿತವಾಗಿರುವ ಮೋದಿ ಜಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಇಂದು 2025-26 ರ ಋತುವಿನಲ್ಲಿ ರಾಬಿ ಬೆಳೆಗಳ ಬೆಂಬಲ ಬೆಲೆ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಸಾಸಿವೆಗೆ ಪ್ರತಿ ಕ್ವಿಂಟಲ್‌ಗೆ 300 ರೂ.ಗಳಷ್ಟು ಹೆಚ್ಚಿಸಲಾಗಿದೆ. ಬೇಳೆಕಾಳುಗಳ ಬೆಲೆಯನ್ನು ಐತಿಹಾಸಿಕವಾಗಿ ಪ್ರತಿ ಕ್ವಿಂಟಲ್‌ಗೆ 275 ರೂ.ಗಳಷ್ಟು ಹೆಚ್ಚಿಸಲಾಗಿದೆ. ಈ ಬೆಂಬಲ ಬೆಲೆ ರೈತರ ಆದಾಯ ಹೆಚ್ಚಿಸುತ್ತವೆ. ರೈತರು ಇನ್ನಷ್ಟು ಸಮೃದ್ಧರಾಗುತ್ತಾರೆ. ರೈತರ ಬಗ್ಗೆ ಕಾಳಜಿ ವಹಿಸಿದ್ದಕ್ಕಾಗಿ ನಾನು ಮೋದಿ ಜಿ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ” ಎಂದು ಹೇಳಿದ್ದಾರೆ.
ಯುಪಿಎ ಆಡಳಿತದಲ್ಲಿ 2004 ಮತ್ತು 2014 ರ ನಡುವೆ ಬೆಂಬಲ ಬೆಲೆಯಲ್ಲಿ ಖರೀದಿಸಿದ ಬೆಳೆಯ ಮೌಲ್ಯವು 7.41 ಲಕ್ಷ ಕೋಟಿ ರೂ.ಗಳಾಗಿದ್ದರೆ, ಮೋದಿ ಆಡಳಿತದ ದಶಕದಲ್ಲಿ ಖರೀದಿ ಮೌಲ್ಯವು 20.64 ಲಕ್ಷ ಕೋಟಿ ರೂ.ಗೆ ಏರಿದೆ ಎಂದು ಸರ್ಕಾರ ಹೇಳಿದೆ. ಹರಿಯಾಣದ ರೈತರು ಬೆಳೆಗಳಿಗೆ ಪಡೆದ ಎಂಎಸ್ಪಿ ತೃಪ್ತಿಕರವಾಗಿರುವುದು ಚುನಾವಣೆ ಫಲಿತಾಂಶದಲ್ಲಿ ಪ್ರಕಟಗೊಂಡಿದೆ ಎಂದು ವೈಷ್ಣವ್ ಹೇಳಿದರು.