Saturday, 23rd November 2024

Narendra Modi: ಕಣಿವೆ ರಾಜ್ಯದಲ್ಲಿ ರಕ್ತಪಾತ ಮಾಡುವುದೇ ಪಾಕಿಸ್ತಾನ ಮತ್ತು ಕಾಂಗ್ರೆಸ್‌ನ ಅಜೆಂಡಾ-ಪ್ರಧಾನಿ ಮೋದಿ ಕಿಡಿ

Narendra Modi

ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ(Narendra Modi) ಶ್ರೀನಗರದಲ್ಲಿ ಚುನಾವಣಾ ಪ್ರಚಾರ ರ್ಯಾಲಿ(Election Rally) ನಡೆಸಿ, ಕಾಂಗ್ರೆಸ್‌-ಎನ್‌ಸಿ(NC) ಮೈತ್ರಿಕೂಟ ಹಾಗೂ ಅವರ ಚುನಾವಣಾ ಪ್ರಣಾಳಿಕೆ(Congress Manifesto) ಬಗ್ಗೆ ಟೀಕಿಸಿದ್ದಾರೆ. ಕಾಂಗ್ರೆಸ್‌ ಮತ್ತು ಎನ್‌ಸಿ ಪ್ರಣಾಳಿಕೆಯಿಂದ ಪಾಕಿಸ್ತಾನಕ್ಕೆ ಬಹಳ ಸಂತಸವಾಗಿದೆ. ಪಾಕಿಸ್ತಾನ ಮತ್ತು ಅಲ್ಲಿನ ರಕ್ಷಣಾ ಸಚಿವರು ಈ ಪ್ರಣಾಳಿಕೆಯನ್ನು ಸ್ವಾಗತಿಸಿದ್ದಾರೆ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಕತ್ರಾದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಂಗ್ರೆಸ್‌ ಮತ್ತು ಪಾಕಿಸ್ತಾನದ ಅಜೆಂಡಾ ಒಂದೇ ಆಗಿದೆ. ಕಣಿವೆ ರಾಜ್ಯದಲ್ಲಿ ಮತ್ತೆ ಆರ್ಟಿಕಲ್‌ 370ಯನ್ನು ಜಾರಿಗೊಳಿಸುವುದು.ಕಾಂಗ್ರೆಸ್‌-ಎನ್‌ ಪ್ರಣಾಳಿಕೆಗೆ ಪಾಕ್‌ ರಕ್ಷಣಾ ಸಚಿವರುವ ಬೆಂಬಲ ಸೂಚಿಸಿದರೆ, ಇಡೀ ಪಾಕಿಸ್ತಾನವೇ ಸಂಭ್ರಮಾಚರಿಸಿದೆ. ಆದರೆ ಜಮ್ಮು-ಕಾ‍ಶ್ಮೀರದಲ್ಲಿ ಪಾಕಿಸ್ತಾನದ ಅಜೆಂಡಾವನ್ನು ಸ್ಥಾಪಿಸಲು ನಾವು ಎಂಗಿಗೂ ಬಿಡುವುದಿಲ್ಲ ಎಂದು ಪುನರುಚ್ಛರಿಸಿದ್ದಾರೆ.

ಕಾಂಗ್ರೆಸ್‌ ಮತ್ತು ಅದರ ಮಿತ್ರಪಕ್ಷಗಳು ಜಮ್ಮು-ಕಾಶ್ಮೀರದಲ್ಲಿ ಆರ್ಟಿಕಲ್‌ 370 ಮತ್ತೆ ಜಾರಿಗೊಳಿಸಲು ಬಯಸುತ್ತಿವೆ. ಅದರರ್ಥ ಕಣಿವೆಯಲ್ಲಿ ಮತ್ತೆ ರಕ್ತಪಾತಕ್ಕೆ ಅವಕಾಶ ಮಾಡಿಕೊಡುತ್ತಿದ್ದಾರೆ ಎಂದರ್ಥ ಪಾಕಿಸ್ತಾನ ಈ ನಡೆಯಮ್ಮಿ ಮುಕ್ತವಾಗಿ ಸ್ವಾಗತಿಸಿ ಸಂಭ್ರಮಾಚರಿಸುತ್ತಿದೆ. ಆದರೆ ಯಾವ ಶಕ್ತಿಯೂ ಜಮ್ಮು-ಕಾಶ್ಮೀರದಲ್ಲಿ ಮತ್ತೆ ಆರ್ಟಿಕಲ್‌ 370ಜಾರಿಗೊಳಿಸಲು ಸಾಧ್ಯವೇ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಈ ಸುದ್ದಿಯನ್ನೂ ಓದಿ: Arms found in JK: ಜಮ್ಮು-ಕಾಶ್ಮೀರದಲ್ಲಿ ಯುದ್ಧಕ್ಕೆ ಸಾಕಾಗುವಷ್ಟು ಅಕ್ರಮ ಶಸ್ತ್ರಾಸ್ತ್ರ ಪತ್ತೆ- ಮೋದಿ ಭೇಟಿ ವೇಳೆ ವಿಧ್ವಂಸಕ ಕೃತ್ಯಕ್ಕೆ ಭಾರೀ ಸಂಚು?