Friday, 22nd November 2024

ಜು.7ರಂದು ಗೋರಖ್‌ಪುರದ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ

ವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಜು.7 ರಂದು ಗೋರಖ್‌ಪುರದ ವಿಶ್ವ ದರ್ಜೆ ರೈಲು ನಿಲ್ದಾಣದ ಪುನರಾಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

“ಸುಮಾರು ರೂ.498 ಕೋಟಿ ವೆಚ್ಚದಲ್ಲಿ ನಿಲ್ದಾಣವನ್ನು ಮರುಅಭಿವೃದ್ಧಿಗೊಳಿಸ ಲಾಗುವುದು.

ಗೋರಖ್‌ಪುರ-ಲಕ್ನೋ ಮತ್ತು ಜೋಧ್‌ಪುರ-ಅಹಮದಾಬಾದ್ ಮಾರ್ಗಗಳಲ್ಲಿ ಗೋರಖ್‌ ಪುರ ರೈಲು ನಿಲ್ದಾಣದಿಂದ ಎರಡು ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

ಗೋರಖ್‌ಪುರ-ಲಕ್ನೋ ವಂದೇ ಭಾರತ್ ಎಕ್ಸ್‌ಪ್ರೆಸ್ ಅಯೋಧ್ಯೆ ಮೂಲಕ ಹಾದು ಹೋಗುತ್ತದೆ. ಇದು ಪ್ರಮುಖ ನಗರಗಳಿಗೆ ಸಂಪರ್ಕ ಸುಧಾರಿಸುತ್ತದೆ ಹಾಗೂ ಪ್ರವಾಸೋ ದ್ಯಮಕ್ಕೆ ಪೂರಕವಾಗಿದೆ.

ಜೋಧ್‌ಪುರ ಸಬರಮತಿ ವಂದೇ ಭಾರತ್ ಎಕ್ಸ್‌ಪ್ರೆಸ್ ಜೋಧ್‌ಪುರ, ಅಬು ರಸ್ತೆ, ಅಹಮ ದಾಬಾದ್‌ನಂತಹ ಸ್ಥಳಗಳಿಗೆ ಸಂಪರ್ಕವನ್ನು ಸುಧಾರಿಸುತ್ತದೆ.

ಪ್ರಧಾನಿ ಅವರು ಉತ್ತರ ಪ್ರದೇಶ, ಛತ್ತೀಸ್‌ಗಢ, ತೆಲಂಗಾಣ ಮತ್ತು ರಾಜಸ್ಥಾನ ಪ್ರವಾಸದಲ್ಲಿ 50,000 ಕೋಟಿ ರೂಪಾಯಿಗಳ 50 ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ನೆರವೇರಿಸಲಿದ್ದಾರೆ.