ಇದೇ ವೇಳೆ ಪ್ರಧಾನಿ ಭದ್ರತೆಗೆ ನಿಯೋಜಿಸಲಾಗಿದ್ದ ವಿವಿಐಪಿ ಭದ್ರತಾ ಯೋಜನೆ ಮತ್ತು ಸಿಬ್ಬಂದಿಯ ವಿವರವೂ ಸೋರಿಕೆಯಾಗಿದೆ.
ಕೇರಳ ಬಿಜೆಪಿ ಕಚೇರಿಗೆ ಬಂದಿರುವ ಬೆದರಿಕೆ ಪತ್ರ ಸಂಚಲನ ಮೂಡಿಸಿದೆ. ಬೆದರಿಕೆ ಪತ್ರದ ಕುರಿತು ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳು ತನಿಖೆ ಯನ್ನು ತೀವ್ರಗೊಳಿಸಿವೆ. ಎರ್ನಾಕುಲಂ ಮೂಲದ ಜೋಸೆಫ್ ಜಾನ್ ನಾಡು ಮುತಮಿಲ್ ಎಂಬ ವ್ಯಕ್ತಿಯ ಹೆಸರಿನಲ್ಲಿ ಈ ಪತ್ರ ಬಂದಿದೆ.
ವಾರದ ಹಿಂದೆಯೇ ಬಿಜೆಪಿ ಕಚೇರಿಗೆ ಈ ಪತ್ರ ರವಾನೆಯಾಗಿದೆ.
ಪ್ರಧಾನಿ ಮೋದಿ ಅವರು ಸೋಮವಾರ ಸಂಜೆ ಕೇರಳಕ್ಕೆ ಭೇಟಿ ನೀಡಲಿದ್ದಾರೆ. ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಚಾಲನೆ ನೀಡುವುದು ಸೇರಿದಂತೆ 2 ದಿನಗಳ ಭೇಟಿಯಲ್ಲಿ ಅವರು ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸ ಲಿದ್ದಾರೆ.
ಏತನ್ಮಧ್ಯೆ, ಕೇರಳ ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳು ಪ್ರಧಾನಿ ನರೇಂದ್ರ ಮೋದಿಗೆ ಕೊಲೆ ಬೆದರಿಕೆ ಪತ್ರದ ಬಗ್ಗೆ ತಮ್ಮ ತನಿಖೆಯನ್ನು ತೀವ್ರಗೊಳಿಸಿವೆ.