Wednesday, 11th December 2024

ಫೆ.10ರಂದು ಪ್ರಧಾನಿ ನರೇಂದ್ರ ಮೋದಿ ಮುಂಬೈಗೆ ಭೇಟಿ

ಮುಂಬೈ: ಪ್ರಧಾನಿ ನರೇಂದ್ರ ಮೋದಿ ಫೆ.10ರಂದು ನಗರಕ್ಕೆ ಭೇಟಿ ನೀಡುತ್ತಿದ್ದು, ಭದ್ರತಾ ದೃಷ್ಟಿಯಿಂದ ಅಂದು ಡ್ರೋನ್‌, ಪ್ಯಾರಾಗ್ಲೈಡರ್‌, ಎಲ್ಲಾ ರೀತಿಯ ಬಲೂನ್‌ಗಳು ಮತ್ತು ರಿಮೋಟ್ ಕಂಟ್ರೋಲ್ ಮೈಕ್ರೋಲೈಟ್ ವಿಮಾನಗಳ ಹಾರಾಟವನ್ನು ನಿಷೇಧಿಸಲಾಗಿದೆ.

ಫೆ.10 ರಂದು ಮುಂಬೈ-ಸೋಲಾಪುರ ಮತ್ತು ಮುಂಬೈ-ಶಿರಡಿ ಮಾರ್ಗಗಳಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಭದ್ರತಾ ದೃಷ್ಟಿ ಯಿಂದ ಬಾನೆತ್ತರಕ್ಕೆ ಹಾರುವ ಎಲ್ಲ ಬಗೆಯ ವಸ್ತುಗಳ ಹಾರಾಟ ನಿಷೇಧಿಸಿ ಉಪ ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ವಿಮಾನ ನಿಲ್ದಾಣ ಸುತ್ತಲಿನ ಪ್ರದೇಶ, ಸಹರ್, ಕೊಲಾಬಾ, ಮಾತಾ ರಮಾಬಾಯಿ ಅಂಬೇಡ್ಕರ್ ಮಾರ್ಗ, ಎಂಐಡಿಸಿ ಸೇರಿದಂತೆ ಪ್ರಧಾನಿ ಸಂಚರಿಸುವ ಬಹುತೇಕ ಪ್ರದೇಶ ಗಳಲ್ಲಿ ಈ ನಿಷೇಧ ಜಾರಿಯಲ್ಲಿರಲಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಭಾಗವಾಗಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾ ಗಿದೆ.