Sunday, 15th December 2024

ತ್ರಿಪುರಾಕ್ಕೆ ಫೆ. 11, 13 ರಂದು ಪ್ರಧಾನಿ ಮೋದಿ ಭೇಟಿ

ವದೆಹಲಿ: ಫೆ. 11 ಮತ್ತು ಫೆ. 13 ರಂದು ಪ್ರಧಾನಿ ಮೋದಿಯವರು ತ್ರಿಪುರಾಕ್ಕೆ ಭೇಟಿ ನೀಡಲಿದ್ದು, ಎರಡು ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಫೆ. 11 ರಂದು ಮೋದಿಯವರು ಈಶಾನ್ಯ ರಾಜ್ಯಗಳ ಗೋಮತಿ ಮತ್ತು ಧಲೈ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರವನ್ನು ನಡೆಸ ಲಿದ್ದಾರೆ. ಫೆ.13 ರಂದು ರಾಜಧಾನಿ ಅಗರ್ತಲಾದಲ್ಲಿ ಚುನಾವಣಾ ಪ್ರಚಾರವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಸುಮಾರು 60 ಸದಸ್ಯ ಬಲದ ತ್ರಿಪುರಾ ವಿಧಾನಸಭೆಗೆ ಫೆ. 16 ರಂದು ಚುನಾವಣೆ ನಡೆಯ ಲಿದ್ದು, ಮಾರ್ಚ್ 2 ರಂದು ಮತ ಎಣಿಕೆ ನಡೆಯಲಿದೆ. ಬಿಜೆಪಿ 55 ಸ್ಥಾನಗಳಲ್ಲಿ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಿದ್ದು, ತನ್ನ ಮಿತ್ರ ಪಕ್ಷವಾದ ಐಪಿಎಫ್ ಟಿ( IPFT) ಗೆ ಐದು ಸ್ಥಾನಗಳನ್ನು ಬಿಟ್ಟುಕೊಟ್ಟಿದೆ.

ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮೂರನೇ ಅವಧಿಗೆ ತನ್ನ ಸರ್ಕಾರವನ್ನು ಉಳಿಸಿ ಕೊಳ್ಳಲು ರಾಜ್ಯದಲ್ಲಿ ಪ್ರಚಾರ ನಡೆಸುತ್ತಿದೆ.

 
Read E-Paper click here