Saturday, 23rd November 2024

ಸಂಸ್ಕೃತ ಭಾಷೆಗೂ ರಾಷ್ಟ್ರೀಯ ಭಾಷೆ ಸ್ಥಾನಮಾನ ಸಿಗಲಿ

ವದೆಹಲಿ: ಸಂಸ್ಕೃತ ಮತ್ತು ಹಿಂದಿ ಎರಡಕ್ಕೂ ರಾಷ್ಟ್ರೀಯ ಭಾಷೆ ಸ್ಥಾನಮಾನ ನೀಡುವಂತೆ ಬಿಜೆಪಿ ಸಂಸದ ಪುಷ್ಪೇಂದ್ರ ಸಿಂಗ್ ಚಂದೇಲ್‌ ಆಗ್ರಹಿಸಿದ್ದಾರೆ.

ಲೋಕಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಉತ್ತರ ಪ್ರದೇಶದ ಹಮೀರ್ಪುರ ಕ್ಷೇತ್ರದ ಸದಸ್ಯ, ಪ್ರಸ್ತುತ ಭಾರತದಲ್ಲಿ ಯಾವುದೇ ರಾಷ್ಟ್ರೀಯ ಭಾಷೆ ಇಲ್ಲ. ಆದರೂ, ಸಂವಿ ಧಾನದ 343 ನೇ ವಿಧಿ ಪ್ರಕಾರ, ಒಕ್ಕೂಟದ ಅಧಿಕೃತ ಭಾಷೆ ದೇವನಾಗರಿ ಲಿಪಿಯಲ್ಲಿ ಹಿಂದಿಯಾಗಿರಬೇಕು ಎಂದು ಸೂಚಿಸಲಾಗಿದೆ ಎಂದು ಹೇಳಿದರು.

ಅಧಿಕೃತ ಭಾಷೆಯಲ್ಲದೆ, 22 ಭಾಷೆಗಳಿಗೆ ಮಾನ್ಯತೆ ನೀಡಲಾಗಿದೆ. ಇದರಲ್ಲಿ ಹಿಂದಿ ಸೇರಿಸಲಾಗಿದೆ ಎಂದರು. ಭೂತಕಾಲದ ಸಂಶೋಧನೆ ನಡೆಸದೆ, ಭವಿಷ್ಯ ನಿರ್ಮಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಉದ್ದೇಶವಿದ್ದಲ್ಲಿ, ಸಂಸ್ಕೃತದ ಉಪಯೋಗವಿಲ್ಲದೆ ಭಾರತದ ಗತಕಾಲದ ಮತ್ತು ಸಾಂಸ್ಕೃತಿಕ ಸುಗಂಧ ಅರಿಯಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.

ಹಿಂದಿಯೊಂದಿಗೆ ಸಂಸ್ಕೃತವನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಬೇಕು ಮತ್ತು ಅದರ ಬಳಕೆ ಜನಪ್ರಿಯಗೊಳಿಸಲು ಪ್ರಯತ್ನಗಳನ್ನು ಮಾಡಬೇಕು ಎಂದು ತಿಳಿಸಿದರು.