Wednesday, 11th December 2024

ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ್ತಿ ಆತ್ಮಹತ್ಯೆ

ಕಾಂಚೀಪುರಂ: ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ್ತಿ ಭಾನುಮತಿ ತಮಿಳುನಾಡಿನ ಕಾಂಚೀ ಪುರಂನಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯು ಸಿರೆಳೆದಿದ್ದಾರೆ.

ಬಾನುಮತಿ ತನ್ನ ರೂಮಿನಲ್ಲಿ ಮೇಲ್ಛಾವಣಿಯಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿ ದ್ದಾಳೆ.

ಬಾನುಮತಿ ತರಕಾರಿ ವ್ಯಾಪಾರಿಯ ಕಿರಿಯ ಮಗಳಾಗಿದ್ದು, ಈ ವಿಷಯದ ಬಗ್ಗೆ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಯಿತು. ಶವವನ್ನ ಮರಣೋತ್ತರ ಪರೀಕ್ಷೆಗೆ ಸಹ ತೆಗೆದುಕೊಳ್ಳಲಾಗಿದ್ದು, ಪೊಲೀಸರು ತನಿಖೆಗಾಗಿ ಸಂತ್ರಸ್ತೆಯ ಫೋನ್ʼನನ್ನ ಸಹ ವಶಪಡಿಸಿ ಕೊಂಡಿದ್ದಾರೆ.

ಭಾನುಮತಿ ತನ್ನ ಕೆಲಸದಿಂದಾಗಿ ತೊಡಕು ಅನುಭವಿಸುತ್ತಿದ್ದು, ಸಾವಿಗೆ ಶರಣಾಗಿರ ಬೇಕು ಎಂದಿದ್ದಾರೆ. ಭಾನುಮತಿ ರಾಜ್ಯ ಮತ್ತು ರಾಷ್ಟ್ರಮಟ್ಟದ ಕಬಡ್ಡಿ ಸ್ಪರ್ಧೆಗಳಲ್ಲಿ ಆಡಿದ್ದಾರೆ.