Thursday, 12th December 2024

ರಾಷ್ಟ್ರೀಯ ವೇಷಭೂಷಣ ಪ್ರಶಸ್ತಿ ಗೆದ್ದ ಮಿಸ್ ಇಂಡಿಯಾ ವರ್ಲ್ಡ್ ನವದೀಪ್ ಕೌರ್

ನವದೆಹಲಿ: ಮಿಸ್ ವರ್ಲ್ಡ್ 2022ರಲ್ಲಿ ಅತ್ಯುತ್ತಮ ರಾಷ್ಟ್ರೀಯ ವೇಷಭೂಷಣ ಪ್ರಶಸ್ತಿಯನ್ನು ಮಿಸ್ ಇಂಡಿಯಾ ವರ್ಲ್ಡ್ ನವದೀಪ್ ಕೌರ್ ಅವರು ಗೆದ್ದಿದ್ದಾರೆ.

ಮಿಸ್ ಇಂಡಿಯಾ ವರ್ಡ್ ಆಗಿರುವ ನವದೀಪ್ ಕೌರ್ ಅವರು, ಬೆರಗುಗೊಳಿಸುವ ಕುಂಡಲಿನಿ ಚಕ್ರ-ಪ್ರೇರಿತ ಉಡುಗೆಗಾಗಿ ಅತ್ಯುತ್ತಮ ರಾಷ್ಟ್ರೀಯ ವೇಷಭೂಷಣ ಪ್ರಶಸ್ತಿಯನ್ನು ಗೆದ್ದಿದ್ದಾರೆ.

‘ಕುಂಡಲಿನಿ ಚಕ್ರ’ದಿಂದ ಪ್ರೇರಿತವಾದ ಅವಂತ್ ಗಾರ್ಡೆ ಉಡುಪಿನಲ್ಲಿ ವಸ್ತ್ರ ವಿನ್ಯಾಸ ಸಂಪೂರ್ಣ ವಾಗಿ ಬೆರಗುಗೊಳಿಸುವಂತೆ ಕಾಣುತ್ತಿದ್ದಳು. ಸುಂದರವಾದ ಪರಿಕಲ್ಪನೆಯನ್ನು ಎಗ್ಗಿ ಜಾಸ್ಮಿನ್ ವಿನ್ಯಾಸಗೊಳಿಸಿದ್ದಾರೆ ಮತ್ತು ರಚಿಸಿದ್ದಾರೆ.