Friday, 22nd November 2024

Navratri 2024: ನವರಾತ್ರಿಯ ನವರೂಪ; ದೇವಿ ಆರಾಧನೆಯ ಪ್ರತಿ ಬಣ್ಣಕ್ಕೂ ಇದೆ ಮಹತ್ವ

Navratri 2024

ದೇಶಾದ್ಯಂತ ಆಚರಿಸಲ್ಪಡುವ ಶರನ್ನವರಾತ್ರಿ ಉತ್ಸವ (Navratri 2024) ಗುರುವಾರದಿಂದ ಪ್ರಾರಂಭವಾಗಲಿದೆ. ದುರ್ಗಾ ದೇವಿಯ (durga devi) ಒಂಬತ್ತು ಅಭಿವ್ಯಕ್ತಿಗಳನ್ನು ಗೌರವಿಸಲು ಆಚರಿಸುವ ಈ ಉತ್ಸವ ಒಂಬತ್ತು ದಿನಗಳ ಕಾಲ ನಡೆಯುವ ಹಬ್ಬವಾಗಿದೆ. ಪ್ರತಿ ದಿನಕ್ಕೆ ಒಂದು ನಿರ್ಧಿಷ್ಟ ಬಣ್ಣವನ್ನು (Nine colours) ತುಂಬಿ ಹಬ್ಬದ ವಿಶೇಷತೆಯನ್ನು ಸಾರಲಾಗುತ್ತದೆ.

ಹಬ್ಬದ ಪ್ರತಿ ದಿನ ನಿರ್ದಿಷ್ಟ ಬಣ್ಣವನ್ನು ಧರಿಸುವುದು ಮಂಗಳಕರವೆಂದು ಪರಿಗಣಿಸಲಾಗಿದೆ. 2024 ರ ನವರಾತ್ರಿಯ ಒಂಬತ್ತು ದಿನಗಳಲ್ಲಿ ಯಾವ ದಿನ ಯಾವ ಬಣ್ಣ ಇದರ ವಿಶೇಷತೆ ಏನು ಎನ್ನುವ ಕುರಿತು ಇಲ್ಲಿದೆ ಮಾಹಿತಿ.

Navratri 2024

ನವರಾತ್ರಿ ದಿನ 1: ಹಳದಿ

ಹಬ್ಬದ ಮೊದಲ ದಿನ ಮಲೆನಾಡಿನ ಮಗಳಾದ ಶೈಲಪುತ್ರಿಗೆ ಸಮರ್ಪಿಸಲಾಗಿದೆ. ಶೈಲಪುತ್ರಿ ದೇವತೆಯು ಹಳದಿ ಬಣ್ಣದೊಂದಿಗೆ ನಂಟು ಹೊಂದಿದ್ದಾಳೆ. ಅದು ಸಂತೋಷ, ಭರವಸೆ ಮತ್ತು ಹೊಳಪನ್ನು ಪ್ರತಿನಿಧಿಸುತ್ತದೆ. ಈ ನಿರ್ದಿಷ್ಟ ಛಾಯೆಯನ್ನು ಧರಿಸುವುದರಿಂದ ದಿನವಿಡೀ ಉತ್ಸಾಹವನ್ನು ಮನದಲ್ಲಿ ತುಂಬಬಹುದು.

Navratri 2024

ನವರಾತ್ರಿ ದಿನ 2: ಹಸಿರು

ನವರಾತ್ರಿಯ ಎರಡನೇ ದಿನ ಬ್ರಹ್ಮಚಾರಿಣಿ ದೇವಿಯನ್ನು ಗೌರವಿಸಲಾಗುತ್ತದೆ. ದುರ್ಗಾ ದೇವಿಯ ಎರಡನೇ ಅವತಾರಕ್ಕೆ ಮೀಸಲಾದ ದಿನ ಇದಾಗಿದೆ. ಈ ದಿನ ಹಸಿರು ಬಣ್ಣಕ್ಕೆ ಸಂಬಂಧಿಸಿದ್ದು, ಇದು ಪ್ರಕೃತಿಯನ್ನು ಸಂಕೇತಿಸುತ್ತದೆ. ಬೆಳವಣಿಗೆ, ಫಲವತ್ತತೆ, ಶಾಂತಿ ಮತ್ತು ಪ್ರಶಾಂತತೆಯ ಭಾವವನ್ನು ಇದು ಉಂಟು ಮಾಡುತ್ತದೆ.

Navratri 2024

ನವರಾತ್ರಿ ದಿನ 3: ಬೂದು

ನವರಾತ್ರಿಯ ಮೂರನೇ ದಿನದಂದು ಚಂದ್ರಘಂಟ ದೇವಿಯನ್ನು ಪೂಜಿಸಲಾಗುತ್ತದೆ. ಸಮತೋಲಿತ ಭಾವನೆಗಳನ್ನು ಪ್ರತಿನಿಧಿಸುವ ಬೂದು ಬಣ್ಣವನ್ನು ಈ ದಿನ ಧರಿಸಲಾಗುತ್ತದೆ. ಇದು ಸೂಕ್ಷ್ಮತೆಯ ಸಂಕೇತವಾಗಿದೆ.

Navratri 2024

ನವರಾತ್ರಿ ದಿನ 4: ಕಿತ್ತಳೆ

ನವರಾತ್ರಿಯ ನಾಲ್ಕನೇ ದಿನದಂದು ಕಿತ್ತಳೆ ಬಣ್ಣದ ಪ್ರತೀಕ. ಮಾತಾ ಕೂಷ್ಮಾಂಡವನ್ನು ಈ ದಿನ ಪೂಜಿಸಲಾಗುತ್ತದೆ. ಕಿತ್ತಳೆ ಬಣ್ಣವು ಉಷ್ಣತೆ ಮತ್ತು ಉತ್ಸಾಹದಂತಹ ಗುಣಗಳನ್ನು ತುಂಬುತ್ತದೆ. ಈ ಬಣ್ಣವು ಸಕಾರಾತ್ಮಕ ಶಕ್ತಿಯಿಂದ ತುಂಬಿರುತ್ತದೆ ಮತ್ತು ವ್ಯಕ್ತಿಯನ್ನು ಲವಲವಿಕೆಯಿಂದ ಇಡುತ್ತದೆ.

Navratri 2024

ನವರಾತ್ರಿ ದಿನ 5: ಬಿಳಿ

ಈ ದಿನ ಸ್ಕಂದಮಾತೆಗೆ ಸಮರ್ಪಿತವಾಗಿದೆ. ಬಿಳಿಯನ್ನು ಧರಿಸುವುದರಿಂದ ಸ್ಕಂದಮಾತೆಯಂತ ಶುದ್ಧತೆ ಮತ್ತು ಮುಗ್ಧತೆಯು ನಮಗೆ ದೊರೆಯುವುದು. ಆಂತರಿಕ ಶಾಂತಿ ಮತ್ತು ಭದ್ರತೆಯ ಭಾವನೆ ಇದರಿಂದ ಲಭಿಸುವುದು.

Navratri 2024

ನವರಾತ್ರಿ ದಿನ 6: ಕೆಂಪು

ಕಾತ್ಯಾಯಿನಿ ದೇವಿಯು ದುರ್ಗಾ ದೇವಿಯ ಆರನೇ ಅವತಾರವಾಗಿದೆ. ಧೈರ್ಯ ಮತ್ತು ಯಶಸ್ಸಿಗೆ ಸಂಬಂಧಿಸಿದೆ. ಕೆಂಪು ಬಣ್ಣ ಉತ್ಸಾಹ ಮತ್ತು ಪ್ರೀತಿಯನ್ನು ಸಂಕೇತಿಸುತ್ತದೆ. ನಮ್ಮೊಳಗೆ ಚೈತನ್ಯವನ್ನು ತುಂಬುತ್ತದೆ.

Navratri 2024

ನವರಾತ್ರಿ ದಿನ 7: ನೀಲಿ

ದುರ್ಗಾ ಮಾತೆಯ ಏಳನೇ ಅವತಾರವಾದ ಕಾಳರಾತ್ರಿಯನ್ನು ಏಳನೇ ದಿನ ಪೂಜಿಸಲಾಗುತ್ತದೆ. ಈ ದಿನದ ಬಣ್ಣ ನೀಲಿ. ಈ ವರ್ಣವು ಶ್ರೀಮಂತಿಕೆ ಮತ್ತು ನೆಮ್ಮದಿಯನ್ನು ಪ್ರತಿನಿಧಿಸುತ್ತದೆ.

Navratri 2024

ನವರಾತ್ರಿ ದಿನ 8: ಗುಲಾಬಿ

ಮಾತಾ ಮಹಾಗೌರಿಯನ್ನು ಗೌರವಿಸುವ ಈ ದಿನ ಗುಲಾಬಿ ಬಣ್ಣದೊಂದಿಗೆ ಸಂಬಂಧ ಹೊಂದಿದೆ. ಇದು ಸಾರ್ವತ್ರಿಕ ಪ್ರೀತಿ, ವಾತ್ಸಲ್ಯ ಮತ್ತು ಸಾಮರಸ್ಯವನ್ನು ಸಂಕೇತಿಸುತ್ತದೆ. ಈ ಬಣ್ಣವನ್ನು ಧರಿಸುವುದರಿಂದ ಎಲ್ಲರೂ ನಿಮ್ಮತ್ತ ಆಕರ್ಷಿತರಾಗುತ್ತಾರೆ.

Navratri 2024

ನವರಾತ್ರಿ ದಿನ 9: ನೇರಳೆ

ನವರಾತ್ರಿಯ ಕೊನೆಯ ದಿನ ಸಿದ್ಧಿಧಾತ್ರಿಯನ್ನು ಪೂಜಿಸಲಾಗುತ್ತದೆ. ಈ ದಿನ ನೇರಳೆ ಬಣ್ಣಕ್ಕೆ ಪ್ರತಿನಿಧ್ಯವಿದೆ. ಜ್ಞಾನೋದಯ, ಐಷಾರಾಮಿ, ಭವ್ಯತೆ ಮತ್ತು ಉದಾತ್ತತೆಯನ್ನು ಇದು ಪ್ರತಿನಿಧಿಸುತ್ತದೆ. ನೇರಳೆ ಬಣ್ಣದ ಉಡುಪನ್ನು ಧರಿಸಿ ದೇವಿಯನ್ನು ಪೂಜಿಸುವುದರಿಂದ ಐಶ್ವರ್ಯ ಮತ್ತು ಶ್ರೀಮಂತಿಕೆ ಲಭಿಸುತ್ತದೆ.