Thursday, 12th December 2024

ನೌಕಾಪಡೆಯ ಮಾಜಿ ಅಧಿಕಾರಿ ಹತ್ಯೆ: ಪ್ಲಾಸ್ಟಿಕ್‌ ಕವರ್‌ನಲ್ಲಿ ಮಾಂಸದ ತುಂಡು ಪತ್ತೆ

ಕೋಲ್ಕತ್ತಾ : ಪುತ್ರನೊಬ್ಬ ತನ್ನ ತಂದೆಯಾದ ನೌಕಾಪಡೆಯ ಮಾಜಿ ಅಧಿಕಾರಿಯನ್ನು ಕೊಲೆಗೈದು, ಆತನ ದೇಹವನ್ನು ತುಂಡರಿಸಿ, ಮಾಂಸದ ತುಂಡುಗಳನ್ನು ಪ್ಲಾಸ್ಟಿಕ್‌ ಕವರ್‌ನಲ್ಲಿ ಸುತ್ತಿ ಕೊಳಕ್ಕೆ ಎಸೆಯಲಾಗಿದೆ.

ಕೋಲ್ಕತ್ತಾ ಬಳಿಯ ದಕ್ಷಿಣ 24 ಪರಗಣಗಳ ಬರುಯಿಪುರ್ ಪ್ರದೇಶದ ಕೊಳದಿಂದ ನೌಕಾಪಡೆಯ ಮಾಜಿ ಅಧಿಕಾರಿಯೊಬ್ಬರ ಛಿದ್ರಗೊಂಡ ದೇಹವನ್ನು ವಶಪಡಿಸಿಕೊಳ್ಳ ಲಾಗಿದೆ. ಮೃತ ವ್ಯಕ್ತಿಯನ್ನು ಉಜ್ವಲ್ ಚಕ್ರವರ್ತಿ (55) ಎಂದು ಗುರುತಿಸಲಾಗಿದೆ.

ಕುಟುಂಬವು ಉಜ್ವಲ್ ಚಕ್ರವರ್ತಿ ಕಾಣೆಯಾದ ಬಗ್ಗೆ ದೂರು ನೀಡಿದ್ದರು. ಇದೀಗ ಅವರ ದೇಹವು ಪ್ಲಾಸ್ಟಿಕ್‌ನಲ್ಲಿ ಸುತ್ತಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಬರುಯಿಪುರದ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ.

ಉಜ್ವಲ್ ಚಕ್ರವರ್ತಿ ಮದ್ಯವ್ಯಸನಿಯಾಗಿದ್ದು, ಮಗನ ಮೇಲೆ ಹಲ್ಲೆ ನಡೆಸುತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.

ದೇಹದ ಭಾಗಗಳನ್ನು ಪ್ಲಾಸ್ಟಿಕ್‌ನಲ್ಲಿ ಸುತ್ತಿ ಬರುಯಿಪುರ್ ಪ್ರದೇಶದ ಕೊಳಕ್ಕೆ ಎಸೆದಿದ್ದಾನೆ. ಇತರ ಭಾಗಗಳು ಅವನ ಮನೆಯ ಬಳಿ ಕಂಡುಬಂದಿವೆ.