ದಾಂತೇವಾಡಾ: ದಂತೇವಾಡ ಜಿಲ್ಲೆ(ಛತ್ತೀಸಗಢದ ನಕ್ಸಲ್ ಪೀಡಿತ ಪ್ರದೇಶ) ಯಲ್ಲಿ 12 ಮಹಿಳೆಯರು ಸೇರಿದಂತೆ ಒಟ್ಟು 24 ನಕ್ಸಲರು ಶರಣಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಗಣರಾಜ್ಯೋತ್ಸವದ ಸಂದರ್ಭ ದಕ್ಷಿಣ ಬಸ್ತಾರ್ ಪ್ರದೇಶದಲ್ಲಿ ಸಕ್ರಿಯರಾಗಿದ್ದ ನಕ್ಸಲರು ಜಿಲ್ಲಾ ಪೊಲೀಸರು ಪುನರ್ವಸತಿ ಅಭಿಯಾನದಿಂದ ನಕ್ಸಲರು ಪ್ರಭಾವಿತರಾಗಿ, ಹಿಂಸಾಚಾರವನ್ನು ತೊರೆದು ಶರಣಾಗಿದ್ದಾರೆ ಎಂದು ತಿಳಿಸಿದ್ದಾರೆ.
ಶರಣಾದವರ ಪೈಕಿ ಚಿಕ್ಪಾಲ್-ಜಂಗ್ಲೆಪರಾ ದಂಡಕರಣ್ಯದ ಮುಖ್ಯಸ್ಥ ಆಯಿತು ಮುಚಾಕಿ(31) ಬಕ್ಮನ್ ಡೆಂಗಾ ಸೋಧಿ(40) ಮತ್ತು ಚಿಕ್ಪಾಲ್-ಸ್ಕೂಲ್ಪರಾ ಡಿಎಕೆಎಂಎಸ್(32) ತಲೆಯ ಮೇಲೆ ತಲಾ ಒಂದು ಲಕ್ಷ ರೂ. ಬಹುಮಾನ ಘೋಷಿಸಲಾಗಿತ್ತು.