Thursday, 12th December 2024

ಬ್ಯಾಂಕುಗಳು , ಬ್ಯಾಂಕೇತರ ಹಣಕಾಸು ಸಂಸ್ಥೆಗಳ ಔಟ್​ಸೋರ್ಸ್: ಆರ್​ಬಿಐ ಹೊಸ ನಿಯಮಾವಳಿ

ಮುಂಬೈ : ಬ್ಯಾಂಕುಗಳು , ಬ್ಯಾಂಕೇತರ ಹಣಕಾಸು ಸಂಸ್ಥೆಗಳು (NBFCs) ಹಾಗೂ ನಿಯಂತ್ರಿಕ ಹಣಕಾಸು ವಲಯದ ಸಂಸ್ಥೆ ಗಳು ಐಟಿ ಸೇವೆಗಳನ್ನು ಔಟ್​ಸೋರ್ಸ್ ಮಾಡುವ ವಿಚಾರದಲ್ಲಿ ಅರ್​ಬಿಐ ಹೊಸ ನಿಯಮಾವಳಿಗಳನ್ನು ರೂಪಿಸಿದೆ.

ಹೊರಗುತ್ತಿಗೆ ನೀಡಿ ಬ್ಯಾಂಕು ಮತ್ತಿತರ ನಿಯಂತ್ರಿತ ಹಣಕಾಸು ವಲಯ ಸಂಸ್ಥೆಗಳು ತಮ್ಮ ಗ್ರಾಹಕರಿಗೆ ಸಮರ್ಪಕ ಸೇವೆ ನೀಡುವ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿದೆ.

ಬ್ಯಾಂಕು ಸೇರಿದಂತೆ ನಿಯಂತ್ರಿತ ಸಂಸ್ಥೆಗಳು (ಆರ್​ಇ) ತಮ್ಮ ಗ್ರಾಹಕರಿಗೆ ಒದಗಿಸುವ ಬ್ಯುಸಿನೆಸ್ ಮಾಡಲ್, ಉತ್ಪನ್ನ ಮತ್ತು ಸೇವೆಗಳ ನಿರ್ವಹಣೆಗೆ ವ್ಯಾಪಕವಾಗಿ ಐಟಿ ಸೇವೆ ಗಳನ್ನು ಬಳಸಿಕೊಳ್ಳುತ್ತವೆ. ಈ ರೀತಿ ಹೊರಗುತ್ತಿಗೆ ಕೊಡುವ ಮೂಲಕ ಬ್ಯಾಂಕುಗಳು ತಮ್ಮ ಗ್ರಾಹಕ ಸೇವೆ ಜವಾಬ್ದಾರಿ ಯಿಂದ ತಪ್ಪಿಸಿಕೊಳ್ಳಲು ಆಗುವುದಿಲ್ಲ.

ಆರ್​ಬಿಐನ ನಿಯಮಗಳಿಂದಲೂ ತಪ್ಪಿಸಿಕೊಳ್ಳುವಂತಿಲ್ಲ ಎಂದು ‘ಮಾಸ್ಟರ್ ಡೈರೆಕ್ಷನ್ ಆನ್ ಔಟ್​ಸೋರ್ಸಿಂಗ್ ಆಫ್ ಇನ್ಫಾರ್ಮೇಶನ್ ಟೆಕ್ನಾಲಜಿ ಸರ್ವಿಸಸ್’ (ಮಾಹಿತಿ ತಂತ್ರಜ್ಞಾನದ ಹೊರಗುತ್ತಿಗೆಗೆ ನಿರ್ದೇಶನ) ಎಂಬ ತನ್ನ ಹೊಸ ನಿಯಮಾವಳಿಯಲ್ಲಿ ಹೇಳಿದೆ.

ಬ್ಯಾಂಕು ಹಾಗೂ ಹಣಕಾಸು ಸಂಸ್ಥೆಗಳ ಹೊರಗುತ್ತಿಗೆ ಸೇವೆಗೆ ಆರ್​ಬಿಐ ರೂಪಿಸಿದ ಹೊಸ ನಿಯಮಗಳು ಬ್ಯಾಂಕಿನಲ್ಲೇ ಒಂದು ಸೇವೆ ಹೇಗೆ ನಿರ್ವಹಣೆ ಅಗುತ್ತದೋ ಅದೇ ರೀತಿ ಹೊರಗುತ್ತಿಗೆ ಕೊಟ್ಟಾಗಲೇ ಅದೇ ಗುಣಮಟ್ಟದ ಸೇವೆ ಸಿಗುತ್ತಿದೆಯಾ ಎಂಬು ದನ್ನು ಬ್ಯಾಂಕು ಖಾತ್ರಿಪಡಿಸಿಕೊಳ್ಳಬೇಕು. ಬ್ಯಾಂಕು ಅಥವಾ ಹಣಕಾಸು ಸಂಸ್ಥೆಯ ಘನತೆಗೆ ಚ್ಯುತಿ ಬರುವ ರೀತಿಯಲ್ಲಿ ಐಟಿ ಸೇವೆ ನೀಡುವವರು ನಡೆದುಕೊಳ್ಳದಂತೆ ಎಚ್ಚರ ವಹಿಸಬೇಕು.