ಜಿ-23 ನಾಯಕರ ಗುಂಪಿನಲ್ಲಿದ್ದ ಶಶಿ ತರೂರ್ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ಸ್ಪರ್ಧಿಸಿ ಸೋತ ನಂತರ ಪಕ್ಷದಲ್ಲಿ ಕಡೆಗಣಿಸಲ್ಪಟ್ಟಿದ್ದಾರೆ ಎನ್ನಲಾಗುತ್ತಿದೆ. ಗುಜರಾತ್ ವಿಧಾನಸಭಾ ಚುನಾವಣೆ ವೇಳೆಯಲ್ಲೂ ಯಾವುದೇ ಹೊಣೆಗಾರಿಕೆ ನೀಡಿರಲಿಲ್ಲ. ಸ್ಟಾರ್ ಪ್ರಚಾರಕರ ಪಟ್ಟಿಯಲ್ಲೂ ಅವರ ಹೆಸರು ಇರಲಿಲ್ಲ.
ಈ ಮಧ್ಯೆ ಪ್ರತಿಕ್ರಿಯಿಸಿರುವ ಕೇರಳ ಎನ್ ಸಿಪಿ ಅಧ್ಯಕ್ಷ ಪಿ. ಸಿ. ಚಾಕೋ, ಒಂದು ವೇಳೆ ಶಶಿ ತರೂರ್ ಎನ್ ಸಿಪಿಗೆ ಬರುವುದಾದರೆ ತುಂಬು ಹೃದಯದಿಂದ ಸ್ವಾಗತಿಸಲಾಗುವುದು ಎಂದು ತಿಳಿಸಿದ್ದಾರೆ. ಒಂದು ವೇಳೆ ಅವರು ಕಾಂಗ್ರೆಸ್ ತೊರೆದರೂ ತಿರುವನಂತ ಪುರಂ ಸಂಸದರಾಗಿ ಇರಲಿದ್ದಾರೆ. ಕಾಂಗ್ರೆಸ್ ಅವರನ್ನು ಏಕೆ ನಿರ್ಲಕ್ಷಿಸಿದೆ ಎಂಬುದು ಗೊತ್ತಿಲ್ಲ ಎಂದರು.
ಆದರೆ, ಎನ್ ಸಿಪಿಗೆ ಹೋಗಲ್ಲ, ಪಿಸಿ ಚಾಕೋ ಅವರೊಂದಿಗೆ ಚರ್ಚೆ ನಡೆಸಿಲ್ಲ ಎಂದು ಶಶಿ ತರೂರ್ ಸ್ಪಷ್ಪಪಡಿಸಿದ್ದಾರೆ.