Friday, 27th September 2024

NCP Leader Controversy: ಅಬ್ದುಲ್‌ ಕಲಾಂ ಜತೆ ಬಿನ್‌ ಲ್ಯಾಡನ್‌ ಹೋಲಿಕೆ; ಶರದ್‌ ಪವಾರ್‌ ಪಕ್ಷದ ನಾಯಕಿ ವಿವಾದ

NCO leader Contro

ನವದೆಹಲಿ: ಮಾಜಿ ರಾಷ್ಟ್ರಪತಿ ಡಾ. ಎ ಪಿ ಜೆ ಅಬ್ದುಲ್‌ ಕಲಾಂ(Dr APJ Abdul Kalam) ಅವರನ್ನು ಉಗ್ರ ಒಸಾಮಾ ಬಿನ್‌ ಲ್ಯಾಡೆನ್‌(Osama bin Laden)ಗೆ ಹೋಲಿಕೆ ಮಾಡಿ ಮಾತನಾಡುವ ಮೂಲಕ ನಾಷನಲಿಸ್ಟ್‌ ಕಾಂಗ್ರೆಸ್‌ ಪಕ್ಷ ಶರದ್‌ ಪವಾರ್‌ ಬಣ(NCP-SP)ದ ನಾಯಕಿ(NCP Leader Controversy)ಯೊಬ್ಬರು ವಿವಾದ ಸೃಷ್ಟಿಸಿದ್ದಾರೆ.

ಎನ್‌ಸಿಪಿ ಎಸ್‌ಪಿ ನಾಯಕಿ ಜಿತೇಂದ್ರ ಅವ್ಹಾದ್‌ ಅವರ ಪತ್ನಿ ರುತಾ ಅವ್ಹಾದ್‌ ಅವರು ಸಾರ್ವಜನಿಕ ಭಾಷಣದಲ್ಲಿ ಕಲಾಂ ಮತ್ತು ಬಿನ್‌ ಲ್ಯಾಡನ್‌ ನಡುವೆ ಹೋಲಿಕೆ ಮಾಡಿ ಹೇಳಿಕೆ ನೀಡಿದ್ದಾರೆ. ಶಿಕ್ಷಣ ಎಷ್ಟು ಮುಖ್ಯ ಎಂಬ ಬಗ್ಗೆ ಮಾತನಾಡುತ್ತಾ, ʼಒಸಾಮಾ ಬಿನ್‌ ಲ್ಯಾಡನ್‌ ಹುಟ್ಟುತ್ತಲೇ ಉಗ್ರನಾಗಿರಲಿಲ್ಲ. ಸಮಾಜದ ಕೆಲವೊಂದು ವಿಚಾರಗಳು ಆತನನ್ನು ಉಗ್ರನನ್ನಾಗಿ ಮಾಡಿತು. ವಿದ್ಯಾರ್ಥಿಗಳು ಬಿನ್‌ ಲ್ಯಾಡನ್‌ ಹೇಗೆ ಉಗ್ರನಾದ ಎಂದು ತಿಳಿದುಕೊಳ್ಳಲು ಅವನ ಜೀವನ ಚರಿತ್ರೆಯನ್ನು ಓದಬೇಕುʼ ಎಂದು ರುತು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.

ಎಪಿಜೆ ಅಬ್ದುಲ್‌ ಕಲಾಂ ಹೇಗೆ ದೇಶದ ರಾಷ್ಟ್ರಪತಿ ಆದರು ಎಂಬುದನ್ನು ತಿಳಿದುಕೊಳ್ಳುವುದು ಎಷ್ಟು ಮುಖ್ಯವೋ, ಬಿನ್‌ ಲ್ಯಾಡನ್‌ ಹೇಗೆ ಉಗ್ರನಾದ ಎಂಬ ಬಗ್ಗೆ ತಿಳಿದುಕೊಳ್ಳುವುದು ಅಷ್ಟೇ ಮುಖ್ಯ. ಅವನ್ಯಾಕೆ ಉಗ್ರನಾದ? ಸಾಮಾಜಿಕ ವಿಚಾರಗಳಿಂದಲೇ ಆತ ಒಬ್ಬ ಉಗ್ರನಾಗಿ ಬೆಳೆಯಲು ಕಾರಣವಾಯಿತು ಎಂದು ಹೇಳಿದ್ದಾರೆ.

ಬಿಜೆಪಿ ಕೆಂಡಾಮಂಡಲ

ರುತು ಅವ್ಹಾದ್‌ ಹೇಳಿಕೆಗೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ. ಬಿಜೆಪಿ ವಕ್ತಾರ ಶೆಹ್‌ಜಾಸ್‌ ಪೂನಾವಾಲ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿ ಖಂಡನೆ ವ್ಯಕ್ತಪಡಿಸಿದ್ದಾರೆ. ಎನ್‌ಸಿಪಿ ಶರದ್ ಪವಾರ್ ಬಣದ ನಾಯಕ ಜೀತೇಂದ್ರ ಅವ್ಹಾದ್‌ ಅವರ ಪತ್ನಿ ಒಸಾಮಾ ಬಿನ್ ಲಾಡೆನ್ ಅವರನ್ನು ಸಮರ್ಥಿಸುತ್ತಾರೆ ಮತ್ತು ಹೊಗಳುತ್ತಾರೆ, ಅವರನ್ನು ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಹೋಲಿಕೆ ಮಾಡಿ ಮಾತನಾಡುತ್ತಾರೆ. ಸಮಾಜ ಆತನನ್ನು ಭಯೋತ್ಪಾದಕನನ್ನಾಗಿ ಮಾಡಿದೆಯಂತೆ. ಜೀತೇಂದ್ರ ಅವ್ಹಾದ್ ಅವರು ಎನ್‌ಇಟಿ ಉಗ್ರ ಇಶ್ರತ್ ಜಹಾನ್‌ನನ್ನು ಸಮರ್ಥಿಸಿಕೊಂಡಿದ್ದರು. ಇಂಡಿಯಾ-ಕಾಂಗ್ರೆಸ್-ಎನ್‌ಸಿಪಿ ಪವಾರ್-ಎಸ್‌ಪಿ ಮೈತ್ರಿಕೂಟದ ನಾಯಕರು ವಾಡಿಕೆಯಂತೆ ಯಾಕೂಬ್, ಅಫ್ಜಲ್, ಸಿಮಿ, ಕಸಬ್ ಮತ್ತು ಇತರರನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಟಾಂಗ್‌ ಕೊಟ್ಟಿದ್ದಾರೆ.

ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಅವರು, ಎನ್‌ಸಿಪಿ-ಎಸ್‌ಪಿ ಸದಸ್ಯರಾಗಿರುವ ಪ್ರತಿಪಕ್ಷ ಇಂಡಿಯಾ ಬಣವು ಮಹಾರಾಷ್ಟ್ರದಲ್ಲಿ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ತುಷ್ಟೀಕರಣ ರಾಜಕೀಯವನ್ನು ಬೆಂಬಲಿಸುತ್ತಿದೆ ಎಂದು ಆರೋಪಿಸಿದರು.

“ಇದೀಗ ವೋಟ್ ಬ್ಯಾಂಕ್‌ಗಾಗಿ INDI ಮೈತ್ರಿ ಮತ್ತು MVA ಹೊಸ ತಂತ್ರವನ್ನು ಪ್ರಾರಂಭಿಸಿದೆ. ಭಯೋತ್ಪಾದನೆ ಬಗ್ಗೆ ಮೃದು ಧೋರಣೆಯನ್ನು ಹೊಂದಿರುವುದು ಮತ್ತೊಮ್ಮೆ ಸಾಬೀತಾಗಿದೆ. ಭಯೋತ್ಪಾದಕರ ಜೀವನಚರಿತ್ರೆಯನ್ನು ಮಕ್ಕಳು ಓದಬೇಕೇ? ಎಂದು ಭಂಡಾರಿ ಟ್ವೀಟ್ ಮಾಡಿದ್ದಾರೆ.

ಈ ಸುದ್ದಿಯನ್ನೂ ಓದಿ: Nandini Ghee: ತಿರುಪತಿ ಲಡ್ಡು ವಿವಾದ ಬಳಿಕ ಮತ್ತಷ್ಟು ಹೆಚ್ಚಿದೆ ʼನಂದಿನಿʼ ಬ್ರಾಂಡ್‌ ಇಮೇಜ್‌!