Friday, 25th October 2024

ಬಿಹಾರ ವಿಧಾನಸಭೆ ಚುನಾವಣೆ ಮತ ಎಣಿಕೆ ಶುರು: ಎನ್ ಡಿಎ ಭಾರೀ ಮುನ್ನಡೆ

ನವದೆಹಲಿ : ಬಿಹಾರ ವಿಧಾನಸಭೆ ಚುನಾಣೆಯ ಫಲಿತಾಂಶಕ್ಕೆ ಈಗಾಗಲೇ ಮತ ಎಣಿಕೆ ಶುರು ವಾಗಿದ್ದು, ಎನ್ ಡಿಎ ಭಾರೀ ಮುನ್ನಡೆ ಸಾಧಿಸಿದೆ.

ಬಿಹಾರದಲ್ಲಿ ಎನ್ ಡಿಎ 119 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದರೆ, ಮಹಾಘಟಬಂದನ್ 116 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಬಿಹಾರರದಲ್ಲಿ ಮೂರು ಹಂತದಲ್ಲಿ ಚುನಾವಣೆ ನಡೆದಿದ್ದು ಶೇ.56ರಷ್ಟು ಮತದಾನವಾಗಿದ್ದು, 3,755 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಬಹುಮತಕ್ಕೆ 122 ಸೀಟುಗಳ ಅಗತ್ಯವಿದೆ.

ಯಾವ ಪಕ್ಷ ಎಷ್ಟು ಕ್ಷೇತ್ರಗಳಲ್ಲಿ ಮುನ್ನಡೆ? ಇಲ್ಲಿದೆ ನೋಡಿ ಮಾಹಿತಿ

ಎನ್ ಡಿಎ -119

ಆರ್ ಜೆಡಿ -116

ಎಲ್ ಜೆಪಿ -6

ಇತರೆ-2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.