Saturday, 14th December 2024

ನಾಳೆ ಎನ್‌ಡಿಎ ಮೈತ್ರಿಕೂಟದ ಶಾಸಕಾಂಗ ಪಕ್ಷದ ಸಭೆ

ಪಾಟ್ನಾ: ಬಿಹಾರ ಅಸೆಂಬ್ಲಿ ಚುನಾವಣೆ ಗೆದ್ದಿರುವ ಎನ್‌ಡಿಎ ಮೈತ್ರಿಕೂಟದ ಶಾಸಕಾಂಗ ಪಕ್ಷದ ಸಭೆ ನ.15 ರಂದು ನಡೆಯಲಿದೆ.

ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾಗಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರಾ ಅಥವಾ ಹಿಂದಕ್ಕೆ ಸರಿಯಲಿದ್ದಾರಾ ಎನ್ನುವುದು ಸಭೆಯಲ್ಲಿ ತಿಳಿಯಲಿದೆ.

ತಮ್ಮಾಪ್ತರ ಜೊತೆ ನಿತೀಶ್ ಕುಮಾರ್, ಮುಖ್ಯಮಂತ್ರಿ ಹುದ್ದೆಯಿಂದ ಹಿಂದಕ್ಕೆ ಸರಿಯುವ ಬಗ್ಗೆ ಚರ್ಚಿಸಿದ್ದಾರೆ ಎಂದು ಹೇಳ ಲಾಗುತ್ತಿದೆ.

ಎಂದಿನಂತೆ ಫ್ರೀ ಹ್ಯಾಂಡ್ ನಿಮಗಿರಲಿದೆ, ಬಿಜೆಪಿಯ ಮುಖ್ಯಮಂತ್ರಿ ಆಯ್ಕೆ ಕೂಡಾ ನೀವೇ ಎಂದು ಖುದ್ದು ಪ್ರಧಾನಿ ಮೋದಿ ಮತ್ತು ಕೇಂದ್ರ ಗೃಹಸಚಿವ ಅಮಿತ್ ಶಾ ಕೂಡಾ ನಿತೀಶ್ ಕುಮಾರ್ ಗೆ ಹೇಳಿದ್ದಾರೆ. ಚಿರಾಗ್ ಪಾಸ್ವಾನ್ ಪಕ್ಷದಿಂದ, ಜೆಡಿಯುಗೆ ಆದ ಹಿನ್ನಡೆಯ ಬಗ್ಗೆ ನಿತೀಶ್ ಬೇಸರಗೊಂಡಿದ್ದಾರೆ.

“ಬಿಜೆಪಿಗಿಂತ ಕಮ್ಮಿ ಸ್ಥಾನ ಪಡೆದರೂ, ನಿತೀಶ್ ಕುಮಾರ್ ಅವರಿಗೆ ಮತ್ತೆ ಮುಖ್ಯಮಂತ್ರಿಯಾಗಲು, ಅವರ ಆತ್ಮಸಾಕ್ಷಿ ಅದಕ್ಕೆ ಒಪ್ಪುತ್ತದಾ”ಎಂದು ಆರ್ಜೆಡಿ ಮೈತ್ರಿಕೂಟದ ಮುಖ್ಯಸ್ಥ ತೇಜಸ್ವಿ ಯಾದವ್ ಪ್ರಶ್ನಿಸಿದ್ದರು.