Friday, 22nd November 2024

Neelakurinji Flowers: 12 ವರ್ಷಗಳಿಗೊಮ್ಮೆ ಹೂ ಬಿಡುವ ನೀಲಕುರುಂಜಿ ಗಿಡಗಳ ಕುರಿತ ಕುತೂಹಲಕರ ಮಾಹಿತಿ ಇಲ್ಲಿದೆ!

Neelakurinji Flowers

ಬೀಜದಿಂದ ಗಿಡವಾಗಿ ಹೂಬಿಟ್ಟು (Neelakurinji Flowers) ಮತ್ತೆ ಬೀಜವನ್ನು (seeds) ಬಿಡುವುದು ಸಾಮಾನ್ಯವಾಗಿ ಸಸ್ಯಗಳ (Plant) ಜೀವನ ಚಕ್ರವಾಗಿರುತ್ತದೆ. ಸಾಮಾನ್ಯವಾಗಿ ಸಸ್ಯಗಳು ಪ್ರತಿ ವರ್ಷ ಹೂವು ಮತ್ತು ಬೀಜಗಳನ್ನು ಬಿಡುತ್ತವೆ. ಸಸ್ಯಗಳಲ್ಲಿ ಕೆಲವು ಒಂದು ವರ್ಷ, ಇನ್ನು ಕೆಲವು ಔಷಧೀಯ ಸಸ್ಯಗಳು ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಬದುಕುತ್ತವೆ. ಕೆಲವೊಂದು ಸಸ್ಯಗಳು ಮಾತ್ರ ತಮ್ಮ ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಅರಳುತ್ತವೆ, ಬೀಜಗಳನ್ನು ಬಿಟ್ಟು ಸಾಯುತ್ತವೆ.

ಜೀವಿತಾವಧಿಯಲ್ಲಿ ಒಮ್ಮೆ ಮಾತ್ರ ಅರಳಿ, ಬೀಜ ಬಿಟ್ಟು ಸಾಯುವ ಸಸ್ಯಗಳ ಬೀಜದಿಂದ ಅದರ ಮುಂದಿನ ಪೀಳಿಗೆಯ ಸಸ್ಯಗಳನ್ನು ಬೆಳೆಸಲಾಗುತ್ತದೆ. ಅಂತಹ ಸಸ್ಯಗಳನ್ನು ಮೊನೊಕಾರ್ಪಿಕ್ (Monocarpic plants) ಎಂದು ಕರೆಯಲಾಗುತ್ತದೆ. ಮೊನೊಕಾರ್ಪಿಕ್ ಸಸ್ಯಗಳು ಪ್ರಬುದ್ಧತೆಯನ್ನು ಪಡೆದ ಅನಂತರವೇ ಅರಳುತ್ತವೆ. ಇದರಲ್ಲಿ ವಿವಿಧ ಜಾತಿಯ ಸಸ್ಯಗಳು ತೆಗೆದುಕೊಳ್ಳುವ ಸಮಯವು ಭಿನ್ನವಾಗಿರುತ್ತದೆ.

ಮೊನೊಕಾರ್ಪಿಕ್ ಸಸ್ಯಗಳಲ್ಲಿ ಬಿದಿರುಗಳು (bamboos) ಕೂಡ ಸೇರಿವೆ. ಇದು ಪ್ರಬುದ್ಧವಾಗಲು 40 ವರ್ಷಗಳಿಗಿಂತಲೂ ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ. ಇಂತಹ ಇನ್ನೊಂದು ಸಸ್ಯವೆಂದರೆ ನೀಲಕುರಿಂಜಿ (Neelakurinji Flowers). ವಿಶೇಷವೆಂದರೆ ಈ ಎರಡೂ ಗಿಡಗಳು ಒಂದೇ ಋತುವಿನಲ್ಲಿ ಹೂಬಿಡುತ್ತವೆ.

Neelakurinji Flowers

ಕುರುಂಜಿಯಲ್ಲಿ ವಿವಿಧ ಜಾತಿಗಳಿವೆ ಅಂತೆಯೇ ಅವು ಪ್ರಬುದ್ಧತೆಗೆ ಬರಲು ತೆಗೆದುಕೊಳ್ಳುವ ಸಮಯ ಕೂಡ ಬೇರೆಬೇರೆಯಾಗಿರುತ್ತದೆ. ನೀಲಕುರಿಂಜಿಗಳು 12 ವರ್ಷಗಳ ಅವಧಿಯಲ್ಲಿ ಪ್ರಬುದ್ಧತೆಗೆ ಬಂದು ಹೂಬಿಡುತ್ತವೆ. ನೀಲಕುರಿಂಜಿ ಹೂವುಗಳು ಕೇರಳ, ಕರ್ನಾಟಕ ಮತ್ತು ತಮಿಳುನಾಡಿನಾದ್ಯಂತ ಪಶ್ಚಿಮ ಘಟ್ಟಗಳ (western ghats) ಶೋಲಾ ಅರಣ್ಯದಲ್ಲಿ ಕಂಡುಬರುತ್ತವೆ.

ಅತ್ಯಂತ ಸುಂದರವಾದ ನೇರಳೆ ನೀಲಿ ಹೂವುಗಳನ್ನು ತಮಿಳುನಾಡಿನ ಪಾಲಿಯನ್ ಎಂಬ ಬುಡಕಟ್ಟು ಜನಾಂಗದವರು ತಮ್ಮ ವಯಸ್ಸನ್ನು ಲೆಕ್ಕಹಾಕಲು ಬಳಸುತ್ತಿದ್ದರು. ಯಾಕೆಂದರೆ ಇದು ಸಾಮಾನ್ಯವಾಗಿ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಪ್ರತಿ 12 ವರ್ಷಗಳ ಅನಂತರ ಅರಳುತ್ತವೆ.

ನೀಲಕುರಿಂಜಿ ಹೂವುಗಳ ವೈಜ್ಞಾನಿಕ ಹೆಸರು ಸ್ಟ್ರೋಬಿಲಾಂತಸ್ ಕುಂಥಿಯಾನಸ್. ಬಾಬಾ ಬುಡನ್‌ಗಿರಿ ಬೆಟ್ಟಗಳ ಸುತ್ತಲೂ ಕಂಡುಬರುವ ಈ ಹೂವುಗಳಿಗೆ ಚಿಕ್ಕಮಗಳೂರು ಅತ್ಯಂತ ಅನುಕೂಲಕರ ಹವಾಮಾನವನ್ನು ಹೊಂದಿದೆ.

Neelakurinji Flowers

19ನೇ ಶತಮಾನದ ಸಸ್ಯಶಾಸ್ತ್ರಜ್ಞ ಕ್ರಿಶ್ಚಿಯನ್ ಗಾಟ್ಫ್ರೈಡ್ ನೀಸ್ ವಾನ್ ಎಸೆನ್ಬೆಕ್ ಅವರು ಮೊದಲ ಬಾರಿಗೆ ಈ ಹೂವಿನ ಬಗ್ಗೆ ವಿಶ್ಲೇಷಣೆ ನೀಡಿದ್ದರು.

Coimbatore news: ತಾನು ʼಸೂಪರ್‌ಮ್ಯಾನ್‌ʼ ಎಂದುಕೊಂಡು 4ನೇ ಮಹಡಿಯಿಂದ ಹಾರಿದ ಯುವಕ!

ನೇರಳೆ ನೀಲಿ ಬಣ್ಣದ ನೀಲಕುರಿಂಜಿ ಹೂವುಗಳು 1,300 ರಿಂದ 2,400 ಮೀಟರ್ ಎತ್ತರದಲ್ಲಿ 60 ಮೀಟರ್ ಎತ್ತರಕ್ಕೆ ಬೆಳೆಯುತ್ತವೆ. ಈ ಸಸ್ಯವು ಯಾವುದೇ ವಾಸನೆ ಅಥವಾ ಔಷಧೀಯ ಗುಣವನ್ನು ಹೊಂದಿಲ್ಲದಿದ್ದರೂ ಅದರ ಹೂಬಿಡುವ ಅವಧಿಯಲ್ಲಿ ಜೇನುನೊಣಗಳು ಅದರ ಬಳಿ ಬರುತ್ತವೆ. ಈ ಹೂವುಗಳಲ್ಲಿರುವ ಜೇನುತುಪ್ಪವನ್ನು ಅತ್ಯಂತ ಸಿಹಿ ಎಂದು ಪರಿಗಣಿಸಲಾಗಿದೆ. ಅದಕ್ಕಾಗಿಯೇ ಜೇನುನೊಣಗಳು ಇಲ್ಲಿ ಮಕರಂದ ಹೀರಲು ಬರುತ್ತವೆ. ಸಾಕಷ್ಟು ಪ್ರವಾಸಿಗರೂ ಇದರ ಸೌಂದರ್ಯವನ್ನು ವೀಕ್ಷಿಸಲು ಬರುತ್ತಾರೆ.