Friday, 22nd November 2024

ನೀಟ್​ ಯುಜಿ- 2023 ಫಲಿತಾಂಶ ಇಂದು ಬಿಡುಗಡೆ..!

ನವದೆಹಲಿ: ವೈದ್ಯಕೀಯ ಶಿಕ್ಷಣಗಳಿಗೆ ನ್ಯಾಷನಲ್​ ಟೆಸ್ಟಿಂಗ್​ ಏಜೆನ್ಸಿ (NTA) ನಡೆಸುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್​ ಯುಜಿ- 2023) ಫಲಿತಾಂಶ ಮಂಗಳವಾರ ಬಿಡುಗಡೆಯಾಗುವ ಸಾಧ್ಯತೆ ಇದೆ.

ಮಣಿಪುರ ಹೊರತು ಪಡಿಸಿ, ದೇಶಾದ್ಯಂತ ಏಕಕಾಲದಲ್ಲಿ ಮೇ 7ರಂದು ನೀಟ್​ ಪರೀಕ್ಷೆಯನ್ನು ನಡೆಸಲಾಗಿದ್ದು, ಕಳೆದ ಜೂನ್​ 4ರಂದು ಇದರ ಕೀ ಉತ್ತರವನ್ನು ಪ್ರಕಟಿಸಲಾಗಿತ್ತು. ಈ ಉತ್ತರದ ವಿರುದ್ಧ ಆಪೇಕ್ಷಣೆ ಸಲ್ಲಿಕೆಗೆ ಜೂ. 6ರವರೆಗೆ ಅವಕಾಶ ನೀಡಲಾಗಿತ್ತು.

20.87 ಲಕ್ಷ ವಿದ್ಯಾರ್ಥಿಗಳು ನೀಟ್​ ಯುಜಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಮಣಿಪುರದಲ್ಲಿ ಜೂನ್​​ 6ರಂದು ಈ ಪರೀಕ್ಷೆಯನ್ನು ನಡೆಸಲಾಗಿತ್ತು. ಅಖಿಲ ಭಾರತದ ಶ್ರೇಣಿಯ ಆಧಾರದ ಮೇಲೆ ಈ ಫಲಿತಾಂಶ ಬಿಡುಗಡೆ ಮಾಡಲಾಗುವುದು. ಫಲಿತಾಂಶ ಬಿಡುಗಡೆ ವೇಳೆಗೆ ಕಟ್​ ಆಫ್​ ಶೇಕಡಾ ವಾರುಗಳನ್ನು ಪ್ರಕಟಿಸ ಲಾಗುವುದು. ನೀಟ್​ ಫಲಿತಾಂಶವನ್ನು neet.nta.nic.in ಅಥವಾ ntaresults.nic.in ಅಲ್ಲಿ ವೀಕ್ಷಣೆ ಮಾಡಬಹುದು.

ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದು, ಇಂದು ಫಲಿತಾಂಶ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ.

  1. ಅಭ್ಯರ್ಥಿಗಳು neet.nta.nic.in ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು.
  2. ಬಳಿಕ ವೆಬ್​ ಸೈಟ್​ನಲ್ಲಿ ಕಾಣಿಸುವ ಫಲಿತಾಂಶದ ಲಿಂಕ್​ ಅನ್ನು ಕ್ಲಿಕ್​ ಮಾಡಬೇಕು
  3. ನಂತರ ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕದಂತಹ ನಿಮ್ಮ ರುಜುವಾತುಗಳನ್ನು ನಮೂದಿಸಿ
  4. ನೀಟ್​ ಯುಜಿ 2023 ಸ್ಕೋರ್‌ಕಾರ್ಡ್ ಅನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.