Thursday, 19th September 2024

NEET ಅರ್ಜಿ ಮಾಹಿತಿ ತಿದ್ದುಪಡಿಗೆ ಇಂದೇ ಕೊನೆ ಅವಕಾಶ

ನವದೆಹಲಿ: ನೀಟ್ ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಪ್ರವೇಶಕ್ಕೆ ನೊಂದಣಿ ಮಾಡಿ ಅರ್ಜಿ ಸಲ್ಲಿಸಿ ಶುಲ್ಕ ಪಾವತಿಸಿರುವ ಅಭ್ಯರ್ಥಿಗಳು ಜು31ರ ಬೆಳಿಗ್ಗೆ 11 ಗಂಟೆಯಿಂದ ಆಗಸ್ಟ್ 1ರ ಮಧ್ಯಾಹ್ನ 11.59ರವರೆಗೆ ಅರ್ಹತೆಗೆ ಅನುಗುಣವಾಗಿ ಅರ್ಜಿಯಲ್ಲಿನ ಮಾಹಿತಿಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

ನೀಟ್ ಅರ್ಜಿಯಲ್ಲಿ ಡಿಕ್ಲರೇಷನ್ ಮಾಡಿರುವ, ಆದರೆ ಇನ್ನೂ ಶುಲ್ಕ ಪಾವತಿ ಮಾಡದಿರುವ ಅಭ್ಯರ್ಥಿಗಳು ನಿಗದಿತ ಶುಲ್ಕವನ್ನು ಪಾವತಿಸಿ ನಂತರ ತಿದ್ದುಪಡಿ ಮಾಡಿಕೊಳ್ಳಬಹುದಾಗಿದೆ ಎಂದು ಕೆ ಇ ಎ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ ತಿಳಿಸಿದ್ದಾರೆ.

ಅಭ್ಯರ್ಥಿಗಳಿಗೆ ವೈಯಕ್ತಿಕವಾಗಿ ಮಾಹಿತಿಯನ್ನು ಕಳುಹಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಆದ್ದರಿಂದ ಯಾರೆಲ್ಲಾ ತಮ್ಮ ಅಪ್ಲಿಕೇಶನ್ ತಿದ್ದುಪಡಿ ಂಆಡಲು ಬಯಸುತ್ತಾರೋ ಅವರೆಲ್ಲರೂ ಸಹ ಇದನ್ನು ಚೆಕ್ ಮಾಡಬಹುದು. ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ನೀವು ನಿಮ್ಮ ಅರ್ಜಿಯನ್ನು ಮತ್ತೊಮ್ಮೆ ರೀಫೀಲ್ ಮಾಡಬಹುದು. ಈ ಕೂಡಲೇ ಹೋಗಿ ಚೆಕ್ ಮಾಡಿ. ತಪ್ಪಿದ್ದಲ್ಲಿ ಅದನ್ನು ಈಗಲೇ ಸರಿಪಡಿಸಿಕೊಳ್ಳಿ.

ಆಗಸ್ಟ್​​ 1ರಂದು ಕನ್ನಡ ಭಾಷೆ ಪರೀಕ್ಷೆ ನಡೆಸಲಾಗುತ್ತದೆ. ಜುಲೈ 26 ಮತ್ತು 28 ರಂದು‌ ನೀಟ್ ಅರ್ಜಿ ಸಲ್ಲಿಸಿದ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಆಗಸ್ಟ್ 1ರಂದು ಮಧ್ಯಾಹ್ನ 3 ರಿಂದ ರಿಂದ 4 ಗಂಟೆವರೆಗೆ ಕನ್ನಡ ಭಾಷಾ ಪರೀಕ್ಷೆ ನಡೆಸಲಾಗುವುದು. ಜುಲೈ 25ರಂದು ನಡೆದ ಕನ್ನಡ ಭಾಷಾ ಪರೀಕ್ಷೆಗೆ ಹವಾಮಾನ ವೈಪರೀತ್ಯ/ ಮಳೆಯ ಕಾರಣದಿಂದ ಗೈರುಹಾಜರಾಗಿದ್ದವರೂ ಸಹ ಆ.1ರಂದು ಕನ್ನಡ ಭಾಷಾ ಪರೀಕ್ಷೆಗೆ ಹಾಜರಾಗಬಹುದು ಎಂದು ತಿಳಿಸಿದ್ದಾರೆ.