Friday, 22nd November 2024

’ಲೋಕ’ ಚುನಾವಣೆ: ಬಾಲಿವುಡ್ ನಟಿ ನೇಹಾ ಶರ್ಮಾ ಸ್ಫರ್ಧೆ…!

ವದೆಹಲಿ: ಬಾಲಿವುಡ್ ನಟಿ, ಸೆಕ್ಸಿ ಕ್ವೀನ್ ಎಂದೇ ಗುರುತಿಸಿಕೊಂಡಿರುವ ನೇಹಾ ಶರ್ಮಾ ಬಿಹಾರದಿಂದ ಸ್ಪರ್ಧಿಸಲು ತಯಾರಿ ನಡೆದಿದೆ ಎನ್ನುವ ಸುದ್ದಿಯೊಂದು ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಬಿಹಾರದ ಭಾಗಲಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಜಯ್ ಶರ್ಮಾ ಇದೀಗ ಲೋಕಸಭೆ ಚುನಾವಣೆಯಲ್ಲಿ ಪುತ್ರಿ ಯನ್ನು ಕಣಕ್ಕಿಳಿಸಲಾಗುತ್ತದೆ.

ಬಿಹಾರದ ಭಾಗಲ್ಪುರದ ಶಾಸಕ, ಶರ್ಮಾ ಅವರು ಮಹಾಘಟಬಂಧನ್ ಸೀಟು ಹಂಚಿಕೆಯ ಚರ್ಚೆಯ ನಂತರ ತಮ್ಮ ಪಕ್ಷವು ಈ ಸ್ಥಾನದಿಂದ ಸ್ಪರ್ಧಿಸಿದರೆ, ಅವರ ಮಗಳಿಗೆ ಕ್ಷೇತ್ರದಿಂದ ಟಿಕೆಟ್ ಸಿಗಬಹುದು. ಇಂಡಿಯಾ ಮೈತ್ರಿ ಒಕ್ಕೂಟದ ಜೊತೆ ಸೀಟು ಹಂಚಿಕೆ ಮಾತುಕತೆ ನಡೆಯುತ್ತಿದೆ. ಮೈತ್ರಿ ಪಕ್ಷಗಳ ಜತೆಗಿನ ಮಾತುಕತೆಯಲ್ಲಿ ಭಾಗಲಪುರ ಕ್ಷೇತ್ರ ಕಾಂಗ್ರೆಸ್‌ಗೆ ಸಿಗಲಿದೆ. ಪಕ್ಷ ನನ್ನನ್ನು ಕೇಳಿದರೆ ನಾನು ಸ್ಪರ್ಧಿಸುತ್ತೇನೆ ಅಥವಾ ಬಹುಶಃ ನನ್ನ ಮಗಳು ನೇಹಾ ಶರ್ಮಾ ಈ ಕ್ಷೇತ್ರದಿಂದ ಸ್ಪರ್ಧಿಸಬಹುದು. ಕಾದು ನೋಡಬೇಕು ಎಂದು ಶಾಸಕ ಅಜಯ್ ಶರ್ಮಾ ಹೇಳಿದ್ದಾರೆ ಎನ್ನಲಾಗಿದೆ.

ಇದು ಕಾಂಗ್ರೆಸ್ ಭದ್ರಕೋಟೆಯಾಗಿದೆ. ಹೀಗಾಗಿ ಇದೇ ಕ್ಷೇತ್ರದಿಂದ ನೇಹಾ ಶರ್ಮಾ ಕಣಕ್ಕಿಳಿಸಲಾಗುತ್ತದೆ ಎಂದಿದ್ದಾರೆ.

ನವಾಜುದ್ದೀನ್ ಸಿದ್ದಿಕ್ಕಿ ಜೊತೆಗಿನ ಜೋಗಿರಾ ಸಾರಾ ರಾರಾ ಚಿತ್ರದ ಮೂಲಕ ಭಾರಿ ಜನಪ್ರಿಯತೆ ಗಳಿಸಿರುವ ನೇಹಾ ಶರ್ಮಾ ಬಾಲಿವುಡ್‌ನಲ್ಲಿ ಸಕ್ರಿಯವಾಗಿದ್ದಾರೆ. ನೇಹಾ ಶರ್ಮಾ ಇದೀಗ ರಾಜಕೀಯದಲ್ಲಿ ಅದೃಷ್ಠ ಪರೀಕ್ಷೆ ನಡೆಸಲು ತಯಾರಿ ನಡೆಸಿದ್ದಾರೆ. ತಂದೆಯ ವಿಧಾನಸಭಾ ಕ್ಷೇತ್ರ ಒಳಗೊಂಡಿರುವ ಕ್ಷೇತ್ರದಲ್ಲಿ ಸ್ಪರ್ಧಿಸಿ ಲೋಕಸಭೆಗೆ ಪ್ರವೇಶಲು ಸಜ್ಜಾಗಿದ್ದಾರೆ.

ಲೋಕಸಭೆ ಚುನಾವಣೆಗೆ ಎನ್‌ಡಿಎ ಘೋಷಿಸಿದ ಒಪ್ಪಂದದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಬಿಹಾರದ 40 ಸ್ಥಾನಗಳಲ್ಲಿ 17 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ ಮತ್ತು ನಿತೀಶ್ ಕುಮಾರ್ ನೇತೃತ್ವದ ಜನತಾ ದಳ (ಯು) 16 ಸ್ಥಾನಗಳನ್ನು ಪಡೆದುಕೊಂಡಿದೆ. ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಹಾಜಿಪುರ ಮತ್ತು ಜಮುಯಿ ಸೇರಿದಂತೆ 5 ಸ್ಥಾನಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿದೆ. ಹಿಂದೂಸ್ತಾನಿ ಆವಾಸ್ ಮೋರ್ಚಾ ಮತ್ತು ರಾಷ್ಟ್ರೀಯ ಲೋಕ ಮೋರ್ಚಾ ತಲಾ 1 ಸ್ಥಾನಕ್ಕೆ ಸ್ಪರ್ಧಿಸಲಿವೆ. 2019ರಲ್ಲಿ ಬಿಹಾರದಲ್ಲಿ ಎನ್‌ಡಿಎ 40 ಸ್ಥಾನಗಳಲ್ಲಿ 39 ಸ್ಥಾನ ಗಳಿಸಿತ್ತು.