Saturday, 14th December 2024

300 ಸಿಬ್ಬಂದಿಗೆ ನೆಟ್‌ಫ್ಲಿಕ್ಸ್‌ ಗೇಟ್‌ ಪಾಸ್‌

ಮುಂಬೈ; ಕರೋನಾ ಕಾಲದ ನಂತರ ನೆಟ್‌ಫ್ಲಿಕ್ಸ್‌ ಕಂಪನಿ ನಷ್ಟ ಅನುಭವಿಸುತ್ತಿದೆ ಎಂದು ಕಂಪನಿ ಅಧಿಕಾರಿಗಳು ಹೇಳಿಕೊಂಡಿ ದ್ದಾರೆ.

ಸ್ಟ್ರೀಮಿಂಗ್ ದೈತ್ಯ ನೆಟ್‌ಫ್ಲಿಕ್ಸ್‌, ದಿನದಿಂದ ದಿನಕ್ಕೆ ಚಂದಾದಾರರನ್ನ ಕಳೆದುಕೊಳ್ಳುತ್ತಿದೆ. ಇದರಿಂದಾಗಿ ನೆಟ್‌ಫ್ಲಿಕ್ಸ್‌ ಇದರ ಬೆಲೆಯನ್ನ ಕೂಡಾ ಕಡಿತಗೊಳಿಸಿದರೂ, ಚಂದಾ ದಾರರ ಸಂಖ್ಯೆಯಲ್ಲಿ ಏರಿಕೆ ಕಂಡು ಬರುತ್ತಿಲ್ಲ. ಆದ್ದರಿಂದ ಈಗ ನೆಟ್‌ಫ್ಲಿಕ್ಸ್‌ ನಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳನ್ನ ವಜಾ ಮಾಡುವ ನಿರ್ಧಾರಕ್ಕೆ ಕಂಪನಿ ಬಂದಿದೆ.

ಮೇ ನಲ್ಲಿ 200 ಉದ್ಯೋಗಿಗಳಿಗೆ ಗೇಟ್ ಪಾಸ್‌ ಕೊಟ್ಟಿತ್ತು. ಈಗ ಮತ್ತೆ 300 ಜನರನ್ನ ವಜಾ ಮಾಡುವುದಕ್ಕೆ ಕಂಪನಿ ಮುಂದಾ ಗಿದೆ. ಈ ಹಿಂದೆ ಅಮೆರಿಕನ್ ಉದ್ಯೋಗಿಗಳೇ ಕೆಲಸವನ್ನ ಕಳೆದುಕೊಂಡಿದ್ದರು, ಈಗ ಮತ್ತೆ ಅವರು ಕೆಲಸ ಕಳೆದು ಕೊಳ್ಳುವ ಆತಂಕ ವನ್ನ ಎದುರಿಸುತ್ತಿದ್ದಾರೆ.

“ವ್ಯವಹಾರದಲ್ಲಿ ಗಮನಾರ್ಹ ಹೂಡಿಕೆಗಳನ್ನ ಮಾಡುವುದನ್ನ ಕಂಪನಿ ಮುಂದುವರೆ ಸುತ್ತಿದೆ. ಆದರೆ ನಿಧಾನಗತಿಯ ಬೆಳವಣಿಗೆಯಿಂದಾಗಿ ಕಂಪನಿ ನಷ್ಟವನ್ನ ಅನುಭವಿಸು ತ್ತಿದೆ. ಆದ್ದರಿಂದ ನಮಗೆ ಎಲ್ಲ ವಿಭಾಗಗಳನ್ನ ನಿಭಾಯಿಸಲು ಸಮಸ್ಯೆ ಉಂಟಾಗುತ್ತಿದೆ. ಆದ್ದರಿಂದ ಕಂಪನಿ ಈ ಒಂದು ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ” ಅಂತ ನೆಟ್‌ಫ್ಲಿಕ್ಸ್‌ ಅಧಿಕಾರಿಗಳು ಸ್ಪಷ್ಟನೆಯನ್ನ ಕೊಟ್ಟಿದ್ದಾರೆ.

ಹಣದುಬ್ಬರ, ಉಕ್ರೇನ್‌ ಯುದ್ಧ ಮತ್ತು ಸ್ಟ್ರೀಮಿಂಗ್ ಅಪ್ಲಿಕೇಶನ್‌ಗಳು ಕೊಡುತ್ತಿರುವ ಪೈಪೋಟಿಯನ್ನ ನೆಟ್‌ಫ್ಲಿಕ್ಸ್‌ ಎದುರಿಸ ಲಾಗದೆ ಪರದಾಡುತ್ತಿದೆ. ಮೊದಲ ತ್ರೈಮಾಸಿಕ ಚಂದಾದಾರರ ಸಂಖ್ಯೆ ಗಣನೀಯವಾಗಿ ಇಳಿಕೆ ಕಂಡಿದೆ.

ಎಲ್ಲಕ್ಕೂ ಪರಿಹಾರವಾಗಿ ಅಗ್ಗದ ಜಾಹೀರಾತುಗಳನ್ನ ಬಳಸಿಕೊಳ್ಳುವುದಕ್ಕೆ ಕಂಪನಿ ನಿರ್ಧಾರ ಮಾಡಿದೆ. ಈ ರೀತಿಯಿಂದಾದರೂ ನಷ್ಟವನ್ನ ಭರಿಸುವ ಪ್ರಯತ್ನಕ್ಕೆ ಕಂಪನಿ ಮಂದಾಗಿದೆ.