Friday, 18th October 2024

ಅನ್ನದಾತರ ಸಬಲೀಕರಣ ಹೊಸ ಮಸೂದೆ ಉದ್ದೇಶ: ಪ್ರಧಾನಿ ನರೇಂದ್ರ ಮೋದಿ

ಪಾಟ್ನಾ: ಲೋಕಸಭೆಯಲ್ಲಿ ಅಂಗೀಕಾರಗೊಂಡಿರುವ ಕೃಷಿ ವಲಯಕ್ಕೆ ಸಂಬಂಧಪಟ್ಟ ಹೊಸ ಮಸೂದೆಯು ದೇಶದ ಬೆನ್ನೆಲುಬಾದ ಅನ್ನದಾತರನ್ನು ಸಬಲೀಕರಣಗೊಳಿಸುತ್ತದೆ. ಈ ಬಗ್ಗೆ ಯಾವುದೇ ಅನುಮಾನ, ಗೊಂದಲ ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಅಭಯ ನೀಡಿದರು.

2014ರ ಹಿಂದೆ ಇದ್ದ ಸರ್ಕಾರಗಳು ಅನ್ನದಾತರನ್ನು ದಿಕ್ಕು ತಪ್ಪಿಸಿದ್ದವು. ಪರಿಣಾಮಕಾರಿ ಮಸೂದೆಗಳ ಜಾರಿ ಬಗ್ಗೆ ಪೊಳ್ಳು ಆಶ್ವಾಸನೆಗಳನ್ನು ನೀಡಿದ್ದರು ಎಂದು ಅವರು ಟೀಕಿಸಿದರು. ನಮ್ಮ ಸರ್ಕಾರ ರೈತರ ಹಿತಾಸಕ್ತಿಗೆ ಬದ್ಧ. ರೈತರು ಬೆಳೆದ ಬೆಳೆಗಳಿಗೆ ಸೂಕ್ತವಾದ ಬೆಂಬಲ ಬೆಲೆ ನೀಡುತ್ತಿದೆ. ಅವರ ಉತ್ಪನ್ನಗಳನ್ನು ಉತ್ತಮ ಬೆಲೆಗೆ ಖರೀದಿಸಿ ಮಧ್ಯವರ್ತಿಗಳು ಮತ್ತು ದಲ್ಲಾಳಿಗಳ ಹಾವಳಿಯನ್ನು ತಪ್ಪಿಸಿದೆ. ರೈತರ ಉತ್ಪನ್ನಗಳನ್ನು ಸೂಕ್ತ ಬೆಲೆಗೆ ಖರೀದಿಸುತ್ತದೆ ಎಂಬುದನ್ನು ನಮ್ಮ ಸರ್ಕಾರ ಮುಂದು ವರೆಸುತ್ತದೆ ಎಂದು ಅವರು ಸ್ಪಷ್ಟಪಡಿಸಿದರು.