Friday, 13th December 2024

ಹೊಸ ಮಸೂದೆ ಹಿಂದಿರುವ ನಮ್ಮ ಉದ್ದೇಶ ಗಂಗೆಯಷ್ಟೇ ಪವಿತ್ರ: ಪ್ರಧಾನಿ ಮೋದಿ

ಲಕ್ನೋ : ನೂತನ ಕೃಷಿ ಮಸೂದೆಯಿಂದ ರೈತರನ್ನು ಮೋಸಗೊಳಿಸುವ ಉದ್ದೇಶ ನಮಗೆ ಇಲ್ಲ. ನಮ್ಮ ಉದ್ದೇಶ ಗಂಗೆಯಷ್ಟೇ ಪವಿತ್ರವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಮಸೂದೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸಮರ್ಥಿಸಿಕೊಂಡಿ ದ್ದಾರೆ. ವಾರಾಣಸಿಯಲ್ಲಿ ಮಾತನಾಡಿ, ಗಂಗಾ ಮಾತೆಯ ದಡದಲ್ಲಿ ನಿಂತು ಹೇಳುತ್ತಿದ್ದೇನೆ. ಈ ಹೊಸ ಮಸೂದೆಯಿಂದ ರೈತರಿಗೆ ಸುಧಾರಣೆ ಮತ್ತು ಹೊಸ ಆಯ್ಕೆಗಳು ಸಿಗಲಿದೆ. ಅಲ್ಲದೇ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಗೆ ಇವು ಪ್ರವೇಶ ಕಲ್ಪಿಸುತ್ತವೆ ಎಂದರು.

ಕೃಷಿ ಮಸೂದೆ ಮೂಲಕ ಮೂಲ ಸೌಕರ್ಯ ಮತ್ತು ವಿಶೇಷ ಕಿಸಾನ್​ ರೈಲುಗಳ ಸುಧಾರಣೆಯಿಂದ ರೈತರ ಆದಾಯ ಹೆಚ್ಚಾಲಿದೆ. ರೈತರು ಅಂತರರಾಷ್ಟ್ರೀಯ ಮಾರುಕಟ್ಟೆಗಳಿಂದ ಸಂಪೂರ್ಣ ಲಾಭ ಪಡೆಯಬೇಕು. ಉತ್ತಮ ಮಾರುಕಟ್ಟೆಗಾಗಿ ನಾವು ಕೆಲಸ ಮಾಡಿದ್ದೇವೆ ಎಂದು ಕೇಂದ್ರ ಕೃಷಿ ಮಸೂದೆಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೊಮ್ಮೆ ಸಮರ್ಥಿಸಿಕೊಂಡರು.

ಇದಕ್ಕೂ ಮುನ್ನ, ಪ್ರಧಾನಿ ನರೇಂದ್ರ ಮೋದಿ ವಾರಾಣಾಸಿಯ ರಾಜ್ ಘಾಟ್ ನಲ್ಲಿ ದೇವ್ ದೀಪಾವಳಿ ಮಹೋತ್ಸವನ್ನು ದೀಪ ಹಚ್ಚುವ ಮೂಲಕ ಉದ್ಘಾಟಿಸಿದರು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಈ ಸಂದರ್ಭದಲ್ಲಿ ಉಪಸ್ಥಿತ ರಿದ್ದರು.

ಕಾರ್ತಿಕಾ ಮಾಸದ ಹುಣ್ಣಿಮೆ ಆಚರಣೆ ಅಂಗವಾಗಿ ಗಂಗಾ ನದಿಯ ದಡದಲ್ಲಿ 15 ಲಕ್ಷ ದೀಪಗಳನ್ನು ಬೆಳಗಲಾಯಿತು. ಸಾಂಪ್ರ ದಾಯಿಕ ನೃತ್ಯಗಾರರು ನೃತ್ಯ ಪ್ರದರ್ಶಿಸಿದರು. ಜೊತೆಗೆ ಲೇಸರ್ ಶೋ ಕೂಡ ನಡೆಸಲಾಯಿತು. ದೀಪಾವಳಿ ನಂತರ ಆಚರಿಸುವ ದೇವ್ ದೀಪಾವಳಿಯಲ್ಲಿ ಗಂಗಾ ನದಿ ದಡದಲ್ಲಿ ಸಹಸ್ರಾರು ದೀಪಗಳನ್ನು ಬೆಳಗಲಾಯಿತು. ಕಾಶಿ ವಿಶ್ವನಾಥ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಪ್ರಧಾನಿ ಮೋದಿ ಮತ್ತು ಯೋಗಿ ಆದಿತ್ಯನಾಥ್ ದೇವ್ ದೀಪಾವಳಿ ಮಹೋತ್ಸವಕ್ಕಾಗಿ ರಾಜ್ ಘಾಟ್ ತಲುಪಿದರು.