~ ರಾಜಸ್ಥಾನ್ ರಾಯಲ್ಸ್ ತಮ್ಮ ಕ್ರೀಡಾಂಗಣದ ಹೊರಗೆ ಮತ್ತೊಂದು ಪಂದ್ಯಾವಳಿಯನ್ನು ಆಡಲು ಸಜ್ಜು
ನವದೆಹಲಿ: ರಾಜಸ್ಥಾನ್ ರಾಯಲ್ಸ್ನ ಆಟಗಾರರು ಪರಿಚಿತ ಪಿಚ್ನಲ್ಲಿ ಆಡುವ ಸಂತೋಷ ಮತ್ತು ಅವರ ತವರು ಮೈದಾನ ದಲ್ಲಿ ಅವರ ಅಭಿಮಾನಿಗಳ ಉತ್ತೇಜನ ಮತ್ತು ಬೆಂಬಲವನ್ನು ಕಳೆದುಕೊಳ್ಳಲಿದ್ದರೆ, ರೆಡ್ ಬುಲ್ ಇಂಡಿಯಾದ ಸಹಭಾಗಿತ್ವ ದಲ್ಲಿ 2021 ರ ಪಂದ್ಯಾವಳಿಯಲ್ಲಿ ತಮ್ಮ ಜರ್ಸಿಯನ್ನು ಬಹಿರಂಗಪಡಿಸಲು ನಡೆದ ಅದ್ಭುತ ಪ್ರದರ್ಶನದೊಂದಿಗೆ ಸವಾಲು ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಬಹಳ ಸಂಭ್ರಮವಿತ್ತು.
ಇದರ ಫಲವಾಗಿ 2021 ರ ಏ.3 ರ ರಾತ್ರಿಯಲ್ಲಿ ಅದ್ಭುತವಾದ 3ಡಿ ಪ್ರೊಜೆಕ್ಷನ್ ಮತ್ತು ಲೈಟ್ ಶೋ ಗಳು ಸವಾಯಿ ಮಾನ್ಸಿಂಗ್ ಕ್ರೀಡಾಂಗಣವನ್ನು ಆವರಿಸಿತು, ಏಕೆಂದರೆ ಈ ಆಡಿಯೊ-ವಿಷುಯಲ್ ಪ್ರದರ್ಶನವು ಕ್ರೀಡಾಂಗಣದಿಂದ ವಿಶ್ವದಾದ್ಯಂತದ ಅಭಿಮಾನಿಗಳಿಗೆ ಮತ್ತು ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರರಿಗೆ ಮುಂಬೈನಲ್ಲಿ ಅವರ ಬಯೋ-ಬಬಲ್ನಲ್ಲಿ ನೇರ ಪ್ರಸಾರವಾಯಿತು.
ಈ ಪ್ರದರ್ಶನವು ರಾಯಲ್ಸ್ ಅಭಿಮಾನಿಗಳ ಹೃದಯಕ್ಕೆ ಹತ್ತಿರವಾದ – ಕ್ರೀಡಾಂಗಣ, ಜೈಪುರ ನಗರ, ರಾಜಸ್ಥಾನಿ ಸಂಸ್ಕೃತಿ ಮತ್ತು ಭೂದೃಶ್ಯ – ಹಾಗೆಯೇ ರೆಡ್ ಬುಲ್ ಅವರೊಂದಿಗಿನ ಫ್ರ್ಯಾಂಚೈಸ್ ಒಡನಾಟವು ಅವರಿಗೆ ತ್ವರಿತ ಗತಿಯಲ್ಲಿ ಮುಂದುವರಿಯಲು, ಹೊಸ ಆಲೋಚನೆಗಳನ್ನು ಹೊರತಂದು ತಂಡದ ಬೆಳವಣಿಗೆಗೆ ಸಹಾಯ ಮಾಡುವುದರ ಪ್ರತಿಬಿಂಬ – ಇವೆಲ್ಲವುಗಳ ಆಚರಣೆ ಯಾಗಿತ್ತು.
ಪಿಚ್ನಿಂದ ಸ್ಟ್ಯಾಂಡ್ಗಳವರೆಗೆ ಸವಾಯ್ ಮಾನ್ಸಿಂಗ್ ಕ್ರೀಡಾಂಗಣವನ್ನು ಬೆಳಗಿಸುವ ಮೂಲಕ ಪ್ರದರ್ಶನ ಆರಂಭವಾ ಯಿತು. ಇದಾದ ನಂತರ, ಹೈ-ಸ್ಪೀಡ್ ಆಕ್ಷನ್ ಶಾಟ್ಗಳ ಮಧೆ ಮಧ್ಯೆೆ ಕ್ರೀಡಾಂಗಣ, ನಗರ ಮತ್ತು ರಾಜಸ್ಥಾನದ ಭೂದೃಶ್ಯದ ಒಂದು ಸಂಗ್ರಹಗಳು ಪ್ರದರ್ಶಿಸಲ್ಪಟ್ಟವು. ಪಂದ್ಯದ ಹಿಂದಿನ ದಿನಗಳ ಪೂರ್ವಭಾವಿ ಕಠಿಣ ಪರಿಶ್ರಮವನ್ನು ಅಭಿಮಾನಿಗಳಿಗೆ ನೋಡಲು ಅವಕಾಶ ಮಾಡಿಕೊಡಲು ಇತ್ತೀಚಿನ ವರ್ಷಗಳಲ್ಲಿನ ರಾಜಸ್ಥಾನ್ ರಾಯಲ್ಸ್ ತಂಡದ ತರಬೇತಿಯ ಅನೇಕ ಅವಧಿಗಳನ್ನು ಸಹ ವೀಡಿಯೊ ತೋರಿಸಿತು.
ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿನ ಕಾರ್ಯಕ್ರಮವು ಮುಕ್ತಾಯಗೊಂಡ ನಂತರ, ವೀಡಿಯೊದಲ್ಲಿ ಸ್ವತಃ ರಾಯಲ್ಸ್ ಆಟಗಾರರು ಕ್ರೀಡಾಂಗಣದಲ್ಲಿ ಪರದೆಯ ಮೇಲೆ 3 ಡಿ ಪ್ರಕ್ಷೇಪಿಸಲ್ಪಟ್ಟರು, 2021 ರಲ್ಲಿ ಅವರು ಧರಿಸುವ ಪಿಂಕ್ ಮತ್ತು ನೀಲಿ ಬಣ್ಣದ ಜರ್ಸಿಯನ್ನು ಮೊದಲ ಬಾರಿಗೆ ಅಭಿಮಾನಿಗಳಿಗೆ ಪ್ರದರ್ಶಿಸುವ ನೇರ ಪ್ರದರ್ಶನವನ್ನು ನಡೆಸಿ ಹೊಸ ಪಂದ್ಯಾವಳಿಗೆ ಜರ್ಸಿಯನ್ನು ಹೊರತಂದರು.
ಈ ಪಂದ್ಯಾವಳಿಯಲ್ಲಿ ತಂಡವು ತಮ್ಮ ಪಂದ್ಯಗಳನ್ನು ಆಡುವಾಗ ಕ್ರೀಡಾಂಗಣದಲ್ಲಿ ಅಬ್ಬರದ ಬೆಂಬಲವನ್ನು ನೀಡಲು ಸಾಧ್ಯ ವಾಗದಿರುವ ರಾಯಲ್ಸ್ ಅಭಿಮಾನಿಗಳಿಗೆ ಮತ್ತು ರಾಜಸ್ಥಾನಕ್ಕೆ ಈ ಪ್ರದರ್ಶನವು ನಿಜವಾದ ಗೌರವವಾಗಿದೆ, ಆದರೆ ಜೋರಾಗಿ ಚೀರ್ಸ್ ಮಾಡಲು ಯೋಗ್ಯವಾದ ಬೌಂಡರಿ ಬಂದಾಗ ಅಥವಾ ವಿಕೆಟ್ ಬಿದ್ದಾಗಲೆಲ್ಲಾ ಪ್ರತಿ ರಾಜಸ್ಥಾನ್ ರಾಯಲ್ಸ್ ಆಟಗಾರರು ಇದನ್ನು ಕೇಳುತ್ತಾರೆ.
ಮುಂಬೈನ ತಂಡದ ಹೋಟೆಲ್ನಿಂದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ಐಪಿಎಲ್ 2021 ಕ್ಕಾಗಿ ಈ ವಿಶಿಷ್ಟ ರಾಜಸ್ಥಾನ್ ರಾಯಲ್ಸ್ ಜರ್ಸಿಯ ಅನಾವರಣವನ್ನು ವೀಕ್ಷಿಸಿದ ಅನುಭವವನ್ನು ಹಂಚಿಕೊಂಡ ರಾಜಸ್ಥಾನ್ ರಾಯಲ್ಸ್ ಆಲ್ರೌಂಡರ್ ಮತ್ತು ರೆಡ್ ಬುಲ್ ಅಥ್ಲೀಟ್ ರಿಯಾನ್ ಪರಾಗ್ “ಕಳೆದ ವರ್ಷದಲ್ಲಿ, ಅದ್ಭುತ ಐಪಿಎಲ್ 2020 ತಂಡದ ಜೆರ್ಸಿಗಳನ್ನು ಅನಾವರಣಗೊಳಿಸಲು ಮತ್ತು ಹಸ್ತಾಂತರಿಸಲು ರೆಡ್ ಬುಲ್ ಅಥ್ಲೀಟ್ ಡ್ಯಾನಿ ರೋಮನ್ ದುಬೈನ ನಮ್ಮ ಹೋಟೆಲ್ನ ಬೀಚ್ ಸೈಡ್ಗೆ ಹಾರಿ ಬಂದಿದ್ದನ್ನು ರಾಜಸ್ಥಾನ್ ರಾಯಲ್ಸ್ ತಂಡವು ಬಹಳ ಸಂಭ್ರಮಿಸಿದೆ.
ಈ ವರ್ಷ, ರೆಡ್ ಬುಲ್ ಪರಿಕಲ್ಪನೆ ಮಾಡಿದ ಮತ್ತೊಂದು ಮಹತ್ವದ ಜರ್ಸಿಯ ಅನಾವರಣ, ಮತ್ತು ಈ ಪಂದ್ಯಾವಳಿಯಲ್ಲಿ ನಮ್ಮ ಅಭಿಮಾನಿಗಳನ್ನು ಹೆಮ್ಮೆ ಪಡುವಂತೆ ಮಾಡಲು ನಾವು ಎದುರು ನೋಡುತ್ತಿದ್ದೇವೆ. ’’ ಎಂದು ಹೇಳಿದ್ದಾರೆ.