Thursday, 12th December 2024

ಬಿಹಾರ ವಿಧಾನಸಭೆ ನೂತನ ಸ್ಪೀಕರ್ ವಿಜಯ್‌ ಕುಮಾರ್‌ ಸಿನ್ಹಾ ಆಯ್ಕೆ

ಪಾಟ್ನಾ: ಬಿಜೆಪಿ ಶಾಸಕ ವಿಜಯ್‌ ಕುಮಾರ್‌ ಸಿನ್ಹಾ ಅವರು ಬಿಹಾರ ವಿಧಾನಸಭೆಯ ನೂತನ ಸ್ಪೀಕರ್‌ ಆಗಿ ಬುಧವಾರ ಆಯ್ಕೆಯಾದರು.

ಮಹಾಮೈತ್ರಿ ಕೂಟದಿಂದ ಆರ್‌ಜೆಡಿಯ ಅವಧ್‌ ಬಿಹಾರಿ ಚೌಧರಿ ಅವರನ್ನು ಕಣಕ್ಕಿಳಿಸಿತ್ತು. ಆಡಳಿತರೂಢ ಎನ್‌ಡಿಎ ಅಭ್ಯರ್ಥಿ ವಿಜಯ್‌ ಕುಮಾರ್‌ 126 ಮತಗಳನ್ನು ಪಡೆದು ವಿಜೇತರಾದರು. ಅವಧ್‌ ಅವರಿಗೆ 114 ಮತಗಳು ದೊರೆತವು.

ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ವಿಧಾನ ಪರಿಷತ್‌ ಸದಸ್ಯರು. ಹಾಗಾಗಿ ಮತದಾನದ ವೇಳೆ ಹಾಜರಿರುವುದು ಸರಿಯಲ್ಲ ಎಂದು ವಿರೋಧ ಪಕ್ಷಗಳು ಪ್ರತಿಭಟನೆ ನಡೆಸಿದವು.