ನವದೆಹಲಿ: ಭಾರತವು ಶೀಘ್ರದಲ್ಲೇ ಯುಎಸ್‌ನ ಸಿಯಾಟಲ್‌ನಲ್ಲಿ ಹೊಸ ದೂತಾವಾಸ ತೆರೆಯಲು ಸಜ್ಜಾಗಿದೆ. ಸುಮಾರು ಏಳು ವರ್ಷಗಳ ಹಿಂದೆ ಈ ಉಪಕ್ರಮದ ಕುರಿತು ಮೊದಲ ಬಾರಿಗೆ ಘೋಷಣೆ ಮಾಡಿತ್ತು.
ಜೂನ್‌ನಲ್ಲಿ ವಾಷಿಂಗ್ಟನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಸ್ ಅಧ್ಯಕ್ಷ ಜೋ ಬಿಡೆನ್ ನಡುವಿನ ಮಾತುಕತೆಯ ನಂತರ ಬಿಡುಗಡೆಯಾದ ಜಂಟಿ ಹೇಳಿಕೆಯಲ್ಲಿ ಭಾರತವು ಈ ವರ್ಷದ ಕೊನೆಯಲ್ಲಿ ಸಿಯಾಟಲ್‌ನಲ್ಲಿ ತನ್ನ ಹೊಸ ದೂತಾವಾಸವನ್ನು ಕಾರ್ಯಗತಗೊಳಿಸಲಿದೆ ಎಂದು ಉಲ್ಲೇಖಿಸಿದೆ.
2002 ರ ಬ್ಯಾಚ್‌ನ ಭಾರತೀಯ ವಿದೇಶಾಂಗ ಸೇವೆ ಅಧಿಕಾರಿ ಪ್ರಕಾಶ್ ಗುಪ್ತಾ ಅವರು ಪ್ರಮುಖ ತಂತ್ರಜ್ಞಾನ ಕೇಂದ್ರವಾಗಿರುವ ಸಿಯಾಟಲ್ ನಲ್ಲಿರುವ ಮಿಷನ್‌ನಲ್ಲಿ ಕಾನ್ಸುಲೇಟ್-ಜನರಲ್ ಆಗಿರುತ್ತಾರೆ ಎಂದು ತಿಳಿದುಬಂದಿದೆ. ಈ ತಿಂಗಳ ಅಂತ್ಯದ ವೇಳೆಗೆ ಕಾನ್ಸುಲೇಟ್ ಕಾರ್ಯಾರಂಭ ಮಾಡುವ ಸಾಧ್ಯತೆ ಇದೆ.
ಗುಪ್ತಾ ಅವರು ಪ್ರಸ್ತುತ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ (MEA) UNP (ಯುನೈಟೆಡ್ ನೇಷನ್ಸ್ ಪೊಲಿಟಿಕಲ್) ವಿಭಾಗದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಭಾರತವು 2016 ರಲ್ಲಿ ಸಿಯಾಟಲ್‌ನಲ್ಲಿ ಕಾನ್ಸುಲೇಟ್ ತೆರೆಯುವ ಯೋಜನೆಯನ್ನು ಮೊದಲು ಘೋಷಿಸಿತ್ತು.