Wednesday, 30th October 2024

ಜೆಎಂಐ ವಿದ್ಯಾರ್ಥಿ ಆ.16 ರವರೆಗೆ ಎನ್‌ಐಎ ಕಸ್ಟಡಿಗೆ

#NIA

ನವದೆಹಲಿ: ಭಯೋತ್ಪಾದಕರಿಗೆ ಹಣಕಾಸು ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮಿಯಾ ಮಿಲಿಯಾ ಇಸ್ಲಾಮಿ ಯಾ ವಿದ್ಯಾರ್ಥಿ ಮೊಹ್ಸಿನ್ ಅಹ್ಮದ್ ಅವರನ್ನು ಆ.16 ರವರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಕಸ್ಟಡಿಗೆ ಕಳುಹಿಸಲಾಗಿದೆ.

ಮೂಲತಃ ಪಾಟ್ನಾ ಮೂಲದ ಅಹ್ಮದ್ ಅವರನ್ನು ದೆಹಲಿಯ ಬಾಟ್ಲಾ ಹೌಸ್ನ ಲ್ಲಿರುವ ಅವರ ನಿವಾಸದಲ್ಲಿ ಶೋಧ ತಂಡವು ಬಂಧಿಸಿದೆ.

‘ಅಹ್ಮದ್ ಐಸಿಸ್ ನ ತೀವ್ರಗಾಮಿ ಮತ್ತು ಸಕ್ರಿಯ ಸದಸ್ಯ. ಭಾರತ ಮತ್ತು ವಿದೇಶ ಗಳಲ್ಲಿನ ಸಹಾನುಭೂತಿಯುಳ್ಳವರಿಂದ ಐಸಿಸ್ ಗೆ ಹಣ ಸಂಗ್ರಹಿಸು ವಲ್ಲಿ ಭಾಗಿಯಾಗಿದ್ದಕ್ಕಾಗಿ ಆತನನ್ನು ಬಂಧಿಸಲಾಗಿದೆ’ ಎಂದು ವಕ್ತಾರರು ಹೇಳಿದರು.

ಐಸಿಸ್ ಚಟುವಟಿಕೆಗಳನ್ನು ಮುಂದುವರಿಸುವ ಸಲುವಾಗಿ ಈ ಹಣವನ್ನು ಸಿರಿಯಾ ಮತ್ತು ಇತರ ಸ್ಥಳಗಳಿಗೆ ಕ್ರಿಪ್ಟೋಕರೆನ್ಸಿ ರೂಪದಲ್ಲಿ ಕಳುಹಿಸುತ್ತಿದ್ದರು ಎಂದು ವಕ್ತಾರರು ಹೇಳಿದರು.

ಮಧ್ಯಪ್ರದೇಶದ ಭೋಪಾಲ್ ಮತ್ತು ರೈಸೆನ್, ಗುಜರಾತ್ನ ಭರೂಚ್, ಸೂರತ್, ನವಸಾರಿ ಮತ್ತು ಅಹಮದಾಬಾದ್, ಬಿಹಾರದ ಅರಾರಿಯಾ, ಕರ್ನಾಟಕದ ಭಟ್ಕಳ ಮತ್ತು ತುಮಕೂರು ನಗರ, ಮಹಾರಾಷ್ಟ್ರದ ಕೊಲ್ಹಾಪುರ ಮತ್ತು ನಾಂದೇಡ್ ಮತ್ತು ಉತ್ತರ ಪ್ರದೇಶದ ದಿಯೋಬಂದ್ ಸೇರಿದಂತೆ ಆರು ರಾಜ್ಯಗಳ ಶಂಕಿತ ವ್ಯಕ್ತಿಗಳ 13 ಸ್ಥಳಗಳಲ್ಲಿ ಫೆಡರಲ್ ಏಜೆನ್ಸಿ ಜುಲೈ 31 ರಂದು ಶೋಧ ನಡೆಸಿತ್ತು.