ಮುಂಬೈ : ಅಂಟಿಲೀಯಾ ಬಾಂಬ್ ಪ್ರಕರಣಗಳಿಗೆ ಸಂಬಂಧಿಸಿದಂತೆ ಮುಂಬೈನ ಮಾಜಿ ಪೊಲೀಸ್ ಅಧಿಕಾರಿ ಪ್ರದೀಪ್ ಶರ್ಮಾ ಅವರ ನಿವಾಸದ ಮೇಲೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ.
ಎನ್ ಐಎ ತಂಡವು ಗುರುವಾರ ಮುಂಬೈನ ಅಂಧೇರಿ (ಪೂರ್ವ)ಯ ಪ್ರದೀಪ ಶರ್ಮಾ ಅವರ ನಿವಾಸ ತಲುಪಿ ಶೋಧ ಕಾರ್ಯಾ ಚರಣೆ ಪ್ರಾರಂಭಿಸಿತು. ಅಧಿಕಾರಿಗಳು ಶೋಧ ನಡೆಸುತ್ತಿದ್ದಾಗ ಶರ್ಮಾ ಅವರ ಮನೆಯೊಳಗೆ ಇದ್ದರು. ದಾಳಿ ಹಿನ್ನಲೆಯಲ್ಲಿ ಶರ್ಮಾ ಅವರ ನಿವಾಸವಿರುವ ಇಡೀ ರಸ್ತೆಯನ್ನು ಬಂದ್ ಮಾಡಿ, ಸುತ್ತಮುತ್ತ ಸಿಆರ್‍ಪಿಎಫ್ ಯೋಧರನ್ನು ನಿಯೋಜನೆ ಮಾಡಲಾಗಿದೆ.
ಎನ್ ಕೌಂಟರ್ ಸ್ಪೆಷಲಿಸ್ಟ್ ಎಂದು ಕರೆಯಲ್ಪಡುವ ಪ್ರದೀಪ ಶರ್ಮಾ ಅವರನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ ಐಎ ಅಧಿಕಾರಿಗಳು ಈ ಹಿಂದೆ ಎರಡು ಬಾರಿ ಪ್ರಶ್ನಿಸಿದ್ದರು. ಅವರು ಮುಂಬೈ ಮಾಜಿ ಪೊಲೀಸ್ ಸಚಿನ್ ವಾಜ್ ಅವರಿಗೆ ಹತ್ತಿರವಾಗಿ ದ್ದಾರೆ ಎಂದು ತಿಳಿದುಬಂದಿದೆ.
ಪ್ರದೀಪ ಶರ್ಮಾ 1983 ರಲ್ಲಿ ಮುಂಬೈ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಆಗಿ ಸೇರಿಕೊಂಡರು ಮತ್ತು ಮುಂಬೈ ಭೂಗತ ಜಗತ್ತಿಗೆ ಸಂಬಂಧಿಸಿದ 300 ಕ್ಕೂ ಹೆಚ್ಚು ಎನ್ ಕೌಂಟರ್ ಗಳಲ್ಲಿ ಭಾಗಿಯಾಗಿದ್ದಾರೆ, ಅವುಗಳಲ್ಲಿ 113 ಶೂಟೌಟ್ ಗಳು ಅವರ ಹೆಸರಿ ನಲ್ಲಿವೆ.